ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಯಕ್ಷಗಾನ ತಾಳಮದ್ದಳೆಯಲ್ಲಿ ಕನ್ನಡ ಸಾಹಿತ್ಯ” ಎನ್ನುವ ವಿಷಯದಲ್ಲಿ ಕನ್ನಡ ಕಾರ್ಯಗಾರ

ಮುರ್ಡೇಶ್ವರ: ಆರ್. ಎನ್.ಎಸ್ ಪಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “ಯಕ್ಷಗಾನ ತಾಳಮದ್ದಳೆಯಲ್ಲಿ ಕನ್ನಡ ಸಾಹಿತ್ಯ” ಎನ್ನುವ ವಿಷಯದಲ್ಲಿ ಕನ್ನಡ ಕಾರ್ಯಗಾರ ನಡೆಸಲಾಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಆರ್.ಎನ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ ಗಾಂವಕರ ಮಾತನಾಡಿ ಯಕ್ಷಗಾನ ನಮ್ಮ ಕರಾವಳಿಯ ಗಂಡುಕಲೆ ಇಂದು ಕನ್ನಡ ಸಾಹಿತ್ಯ ಉಳಿದಿದ್ದು ಅದು ಯಕ್ಷಗಾನ ಕಲೆಯಲ್ಲಿ ಮಾತ್ರ, ಪರಿಶುದ್ಧವಾದ ಕನ್ನಡ ಬಳಕೆ ಯಕ್ಷಗಾನದಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.

ಪ್ರಾಚಾರ್ಯರಾದ ಡಾ.ಸಂಜಯ್ ಕೆ.ಎಸ್ ರವರು ಮಾತನಾಡಿ ಇಂದು ಭಾರತವನ್ನು ವಿದೇಶಗಳಲ್ಲಿ ಪಚಾರಗೊಳಿಸುವ
ನಮ್ಮ ದೇಶಿಯ ಕಲೆಗಳಲ್ಲಿ ಯಕ್ಷಗಾನ ಕಲೆ ಹಿರಿದಾದ ಕಲೆ ಎಂದು, ನಾವು ಶಾಲಾ- ಕಾಲೇ ಗಳಲ್ಲಿ ಯಕ್ಷಗಾನವನ್ನು ಪಠ್ಯದಲ್ಲಿ ಅಳವಡಿಸಬೇಕೆಂದರು. ಉಪನ್ಯಾಸಕಿ ದೇವಕಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ “ಕಂಸವಧೆ” ಯಕ್ಷಗಾನ ತಾಳಮದ್ದಳೆ ಏರ್ಪಡಿಸಿ ಹಿಮ್ಮೇಳನದಲ್ಲಿ – ಭಾಗವತರಾಗಿ -ಗಣಪತಿ ಕಾಯ್ಕಿಣಿ, ಮದ್ದಳ ವಾದಕರಾಗಿ- ಮಂಜುನಾಥ ಭಂಡಾರಿ ಕಡತೋಕ, ಚಂಡೆ ವಾದಕರಾಗಿ-ಯೋಗ, ಭಟ್ಟ ಉಪ್ಪುಂದ, ಮುಮ್ಮೇಳನದಲ್ಲಿ ಅಕ್ರೂರನಾಗಿ -ಹೆ.ಚ್‌ಎಸ್ ಗುನಗ ,ಕೃಷ್ಣನಾಗಿ, ಕೃಷ್ಣ ಹೆಗಡೆ ,ರಜಕನಾಗಿ – ರಾಘವೇಂದ್ರ ಗಾಯತೊಂಡೆ, ಕಂಸನಾಗಿ – ಮಾಧವ ಪಿ, ಪಾತ್ರ
ನಿರ್ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಯಕ್ಷದೂಟವನ್ನು ಉಣಬಡಿಸಿದರು. ನಂತರ ಕಾಲೇಜು ವತಿಯಿಂದ ಎಲ್ಲಾ ಕಲಾವಿದರನ್ನು ಸನ್ಮಾನಿಸಲಾಯಿತು.

Exit mobile version