Focus News
Trending

ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಶ್ರಾವಣ ಮಾಸದ 1 ನೇ ದಿನದ ಕಾರ್ಯಕ್ರಮ

ಶಿರಸಿ : ದಿನಾಂಕ: 29-07-2022 ರಂದು ಜಗನ್ಮಾತೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ “ಶ್ರಾವಣ ಮಾಸ ” ದ ನಿಮಿತ್ತ ಮೊದಲನೇ ದಿನದ 1 ನೇ ಕಾರ್ಯಕ್ರಮ ಶ್ರೀ ಗುರುಸಿಧ್ದೇಶ್ವರ ಮಹಿಳಾ ಮಂಡಳ, ಶಿರಸಿ ಇವರಿಂದ ಭಜನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮಹಿಳಾ ಮಂಡಳದ ಸದಸ್ಯರು ವಿವಿಧ ಭಜನೆಗಳನ್ನು ಪ್ರಸ್ತುತಪಡಿಸಿದರು.

ಕಚೇರಿಯಲ್ಲೇ ಸಾವಿಗೆ ಶರಣಾದ ಅಬಕಾರಿ ಉಪನಿರೀಕ್ಷಕ: ಡೆತ್ ನೋಟಿನಲ್ಲಿ ಏನಿದೆ? ಮೃತನ ಸಹೋದರ ಹೇಳಿದ್ದೇನು?

2ನೇ ಕಾರ್ಯಕ್ರಮದಲ್ಲಿ ಮಾತಾ ಸಾಂಸ್ಕøತಿಕ ವೇದಿಕೆ, ಶಿರಸಿ ಇವರು ಲಲಿತಾ ಸಹಸ್ರನಾಮ ಮತ್ತು ಭಜನೆ ಕಾರ್ಯಕ್ರಮ ಪ್ರಸ್ತುತಪಡಿಸಿದರು.
3 ನೇ ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಜಯರಾಮ ಶೆಟ್ಟಿ ಶಿರಸಿ ಇವರು ನಗೆ ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಹಾಸ್ಯಗಳನ್ನು ಪ್ರದರ್ಶಿಸಿದರು. 4ನೇ ಕಾರ್ಯಕ್ರಮದಲ್ಲಿ ಶ್ರೀ ಎಸ್.ಎಸ್. ಶಿವಾನಂದ ಸ್ವಾಮಿ, ಶಿವಮೊಗ್ಗ ಇವರಿಂದ ಕೀರ್ತನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಮಂಡಳಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button