ಆಜಾದಿ ಕಾ ಅಮೃತ ಮಹೋತ್ಸವ ಸ್ಪರ್ಧೆ : ಕ.ವಿ.ವಿ ಮಟ್ಟದಲ್ಲಿ ಜಿ ಸಿ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

ಅಂಕೋಲಾ : ದೇಶದ ಸ್ವಾತಂತ್ರ್ಯದ 75 ನೇ ವರ್ಚಾಚರಣೆ (ಅಮೃತ ಮಹೋತ್ಸವದ ) ಪ್ರಯುಕ್ತ ಜುಲೈ.30 ರಂದು ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಅಂಕೋಲಾ ತಾಲೂಕಿನ ಗೋಖಲೆ ಸೆಂಟನರಿ C (ಜಿ. ಸಿ) ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುವ ಮೂಲಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ವಾತಂತ್ರ್ಯ ಓಟ ಸ್ಪರ್ಧೆಯಲ್ಲಿ ಕೋಕಿಲಾ ಗೌಡ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಪೋಸ್ಟರ ಮೇಕಿಂಗ್ ಸ್ಪರ್ಧೆಯಲ್ಲಿ ಪ್ರತೀಕ ನಾಯಕ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರೆ, ದೇಶಭಕ್ತಿಗೀತೆ ಸಮೂಹ ಸ್ಪರ್ಧೆಯಲ್ಲಿ ಆರ್ಯ ಪ್ರಭು ಸಂಗಡಿಗರು ತೃತೀಯ ಸ್ಥಾನವನ್ನು ಪಡೆದರು.

ಉಪನ್ಯಾಸಕ ನಾಗರಾಜ ದಿವಗಿ ರಚಿಸಿ ನಿರ್ದೇಶಿಸಿದ ಅಪೂರ್ವ ನಾಯಕ ಸಂಗಡಿಗರು ಅಭಿನಯಿಸಿದ ಕಿರು ನಾಟಕಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಚೈತ್ರ ಶೆಟ್ಟಿ, ಭಾಗ್ಯಶ್ರೀ ನಾಯಕ, ಕಾವ್ಯ ಗಾಂವಕರ, ಅಮೃತಾ ಗಾಂವಕರ, ಪ್ರತೀಕ ನಾಯ್ಕ, ಕಾರ್ತಿಕ ನಾಯ್ಕ, ಕಾರ್ತಿಕ ಗಾಂವಕರ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಕ.ವಿ.ವಿ. ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಅಧ್ಯಾಪಕ ವೃಂದದವರು ಮೆಚ್ಚುಗೆ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version