ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ : ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆ : ಬಹುಮಾನ ವಿತರಣೆ.

ಅಂಕೋಲಾ: ತಾಲೂಕು ಆಡಳಿತ ಅಂಕೋಲಾ ಮತ್ತು ತಾಲೂಕು ಪಂಚಾಯಿತಿ ಅಂಕೋಲಾ ಇವರ ಆಶ್ರಯದಲ್ಲಿ ಡಾ.ಶಿವಯೋಗಿ ಜನ್ಮ ದಿನೋತ್ಸವ ಹಾಗೂ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಪಟ್ಟಣದ ಪಿ.ಎಂ.ಜ್ಯೂನಿಯರ್ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕೆ.ಎಲ್. ಇ ಮಹಾವಿದ್ಯಾಲಯದ ಸಹಯೋಗದಲ್ಲಿ ತಾಲೂಕಿನ ವಿದ್ಯಾರ್ಥಿಗಳಿಗಾಗಿ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಶಿಕ್ಷಣ ಮಹಾವಿದ್ಯಾಲಯ, ಪದವಿ ಹಾಗೂ ಪದವಿ ಪೂರ್ವ ವಿಭಾಗದ ನಾನಾ ಕಾಲೇಜುಗಳ ಒಟ್ಟೂ 45 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮಾತನಾಡಿ ಯುವಕರು ವ್ಯಸನಗಳಿಗೆ ಬಲಿಯಾಗಬಾರದು.ಯುವ ಶಕ್ತಿಯ ಸದ್ಬಳಕೆಯಾದರೆ ಉತ್ತಮ ಸಮಾಜ ನಿರ್ಮಾಣ ಮತ್ತು ದೇಶದ ಪ್ರಗತಿ ಸಾಧ್ಯ ಎಂದರು.

ಸ್ಪರ್ಧೆಯಲ್ಲಿ ಕೆ.ಎಲ್. ಇ ಶಿಕ್ಷಣ ಮಹಾವಿದ್ಯಾಲಯದ ಮಹಿಮಾ ಗೌಡ ಮತ್ತು ರಾಜಶ್ರೀ ನಾಯ್ಕ ಪ್ರಥಮ, ಕೆ.ಎಲ್. ಇ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದ ತೇಜು ನಾಯ್ಕ ಮತ್ತು ತಮನ್ನಾ ಖಾನ್ ದ್ವಿತೀಯ ಸ್ಥಾನ ಪಡೆದುಕೊಂಡರೆ ಹಿರಿಯರೊಂದಿಗೆ ಸ್ಪರ್ಧೆ ಎದುರಿಸಿ ಹಿಮಾಲಯ ಪಿ ಯು ಕಾಲೇಜಿನ ಭಾರ್ಗವ ಶಂಕರ ನಾಯ್ಕ – ಲಕ್ಷ್ಮೇಶ್ವರ ತೃತೀಯ ಬಹುಮಾನ ಪಡೆದುಳ್ಳುವ ಮೂಲಕ ಗಮನ ಸೆಳೆದರು. ವಿವಿಧ ಕಾಲೇಜುಗಳ ಇತರೆ ವಿದ್ಯಾರ್ಥಿಗಳು ಸಮಾಧಾನಕರ ಫಲಿತಾಂಶ ದಾಖಲಿಸಿದರು.

ಪುರಸಭೆ ಉಪಾಧ್ಯಕ್ಷೆ ರೇಖಾ ಡಿ ಗಾಂವಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮುಖ್ಯಾಧಿಕಾರಿ ಎನ್. ಎಂ.ಮೇಸ್ತ, ತಾಲೂಕು ಆರೋಗ್ಯಧಿಕಾರಿ ಡಾ.ನಿತಿನ್ ಹೊಸ್ಮೇಳಕರ, ಪಿ.ಎಂ.ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಪಾಲ್ಗುಣ ಗೌಡ ಉಪಸ್ಥಿತರಿದ್ದರು.

ಉಪನ್ಯಾಸಕ ಉಲ್ಲಾಸ ಹುದ್ಧಾರ ಕಾರ್ಯಕ್ರಮ ನಿರ್ವಹಿಸಿದರು. ಬೋಧಕ ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version