ಕೋರ್ಟ್ ಕ್ಯಾಂಟೀನ್ ಪುನರಾರಂಭ : ನ್ಯಾಯಾಧೀಶರಿಂದ ಉದ್ಘಾಟನೆ |ಉಪಹಾರ ಸೇವಿಸಲು ಹಲವರಿಗೆ ಅನುಕೂಲ

ಅಂಕೋಲಾ: ನಾನಾ ಕಾರಣದಿಂದ ಕಳೆದ ಕೆಲ ವರ್ಷಗಳಿಂದ ಮುಚ್ಚಿದ್ದ ಅಂಕೋಲಾ ಜೆ.ಎಂ.ಎಫ್. ಸಿ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನ್ ಆಗಸ್ಟ್ 3 ರ ಬುಧವಾರ ಪುನರಾರಂಭಗೊಂಡಿತು.

ಜೆ.ಎಂ.ಎಫ್. ಸಿ ಹಿರಿಯ ನ್ಯಾಯಾಧೀಶರಾದ ಮನೋಹರ ಎಂ,ನ್ಯಾಯಾಧೀಶರಾದ ಪ್ರಶಾಂತ ಬಾದವಡಗಿ, ಹೆಚ್ಚುವರಿ ಸಿವಿಲ್ ನೂತನ ನ್ಯಾಯಾಧೀಶೆಯಾಗಿರುವ ಅರ್ಪಿತಾ ಬೆಲ್ಲದ ರಿಬ್ಸನ್ ಕತ್ತರಿಸುವ ಮೂಲಕ ನವೀಕೃತ ಕ್ಯಾಂಟೀನ್ ಉದ್ಘಾಟಿಸಿದರು.

ಸರ್ಕಾರಿ ಅಭಿಯೋಜಕರಾದ ಗಿರೀಶ್ ಪಟಗಾರ, ನ್ಯಾಯವಾದಿಗಳಾದ ಸುಭಾಷ ನಾರ್ವೇಕರ್, ಪ್ರದೀಪ ನಾಯಕ, ಬಿಟಿ ನಾಯಕ,ಎನ್. ಎಸ್. ನಾಯಕ, ವಿ.ಎಸ್. ನಾಯಕ, ವಿನಾಯಕ ನಾಯ್ಕ, ಬಿ.ಡಿ.ನಾಯ್ಕ, ವಿನೋದ ಶಾನಭಾಗ್, ಉಮೇಶ ನಾಯ್ಕ, ಲಕ್ಷ್ಮೀದಾಸ , ನಿತ್ಯಾನಂದ ಕವರಿ, ಸುರೇಶ ಬಾನಾವಳಿಕರ, ಪಿ.ಆರ್. ನಾಯ್ಕ, ಆರ್. ಟಿ.ಗೌಡ, ದೀಕ್ಷಿತ್ ನಾಯಕ, ಗಜಾನನ ನಾಯ್ಕ, ಸಂತೋಷ ನಾಯ್ಕ, ಮಮತಾ ಕೆರೆಮನೆ,ಪ್ರವೀಣಾ ನಾಯ್ಕ, ತೇಜು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕ್ಯಾಂಟೀನ್ ಟೆಂಡರದಾರ ಕಿರಣ ಹಾಗೂ ಇತರರಿದ್ದರು. ಕೋರ್ಟ್ ಆವರಣದಲ್ಲಿ ಕ್ಯಾಂಟೀನ್ ಪುನರಾರಂಭವಾಗಿರುವುದರಿಂದ ವಕೀಲರು, ಕಕ್ಷಿದಾರರು, ನ್ಯಾಯಾಲಯದ ಸಿಬ್ಬಂದಿಗಳು ಮತ್ತಿತರರಿಗೆ ಅನುಕೂಲವಾಗಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version