ಶಾಲೆಯ ಕಟ್ಟಡ ಕುಸಿತ: ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

ಭಟ್ಕಳ : ಉತ್ತರಕನ್ನಡದಲ್ಲಿ ಮಳೆ ಆತಂಕ‌ಕಡಿಮೆಯಾಗಿದೆ. ಆದರೆ ಮಳೆ ಸಂಬಂಧಿತ ಅವಾಂತರಗಳು ಸಂಭವಿಸುತ್ತಲೇ ಇವೆ. ಹೌದು, ಗುಡ್ಡಗುಸಿತದಿಂದಾಗಿ ನಾಲ್ವರು ಮನೆಯಡಿ ಸಿಲುಕಿ ಸಾವನ್ನಪ್ಪಿದ‌ ಬೆನ್ನಲ್ಲೆ ಇದೀಗ ತಾಲೂಕಿನ ಮುಂಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಕುಸಿತವಾಗಿದೆ.

ಶಾಲೆಯ ಒಂದು ಪಾರ್ಶ್ವದ ಕೊಠಡಿ ಕುಸಿದಿದೆ. ಹಳೆಯ ಕಟ್ಟಡವಾಗಿದ್ದರಿಂದ ಮಳೆಗೆ ನೆನೆದು ಕುಸಿದಿದೆ ಎನ್ನಲಾಗಿದೆ. ರಾತ್ರಿಯಾದ್ದರಿಂದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ. ಶಾಲೆ ನಡೆಯುವ ಸಂದರ್ಭದಲ್ಲಿಯೇ ಈ ದುರ್ಘಟನೆ ಸಂಬಂದಿಸಿದ್ರೆ ಜೀವ ಹಾನಿಯ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ವಿಸ್ಮಯ ನ್ಯೂಸ್ ಭಟ್ಕಳ

Exit mobile version