ಅಂಕೋಲಾದಲ್ಲಿ ಮತ್ತೆರಡು ಕರೊನಾ ಧೃಢ ?

ಅಗಸೂರಿನ ಮೃತ ವ್ಯಕ್ತಿ ಮತ್ತು ಹಾರವಾಡದ ಪುರುಷನಲ್ಲಿ ಸೋಂಕು
ಜಿಲ್ಲಾಡಳಿತದ ಜೊತೆ ಜನತೆಯ ಸಹಕಾರ ಅಗತ್ಯ ಸಹಾಯಕ ಆಯುಕ್ತರ ಹೇಳಿಕೆ

ಅಂಕೋಲಾ : ಜಿಲ್ಲೆಯಲ್ಲಿ ಇಂದು 60ಕ್ಕೂ ಹೆಚ್ಚು ಕೋವಿಡ್-19 ಪ್ರಕರಣಗಳು ಧೃಡವಾಗುವ ಸಾಧ್ಯತೆ ಹೆಚ್ಚಿದ್ದು, ತಾಲೂಕಿನಲ್ಲಿಯೂ ಎರಡು ಪ್ರಕರಣಗಳು ಖಚಿತವಾಗಿವೆ ಎನ್ನಲಾಗಿದೆ.
ಮೃತ ವ್ಯಕ್ತಿಯಲ್ಲಿಯೂ ಸೋಂಕು ಧೃಢ: ತಾಲೂಕಿನ ಅಗಸೂರು ಮೂಲದ 67ರ ಪುರುಷನೋರ್ವ ಸೋಮವಾರ ಮಣಿಪಾಲದ ಆಸ್ಪತ್ರೆಯೊಂದರಲ್ಲಿ ಮೃತನಾಗಿದ್ದು, ಆ ವೇಳೆ ಆತನಲ್ಲಿ ಸೋಂಕಿನ ಲಕ್ಷಣಗಳು ಧೃಢ ಪಟ್ಟಿವೆ ಎಂದು ತಿಳಿದು ಬಂದಿದೆ. ಕಳೆದ ಕೆಲದಿನಗಳ ಹಿಂದೆ ಕರುಳು ಬೇನೆ ಸಮಸ್ಯೆಯಿಂದ ಈತ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತಾಲೂಕಿನಲ್ಲಿ ಭಯದ ವಾತವರಣ ಮೂಢಿಸಿದ್ದ ಕೊರೊನಾ ಸೋಂಕಿನ ಭೀತಿಯ ಹಿನ್ನಲೆ ಅಥವಾ ಆರೋಗ್ಯದ ಏರುಪೇರಿನ ಸಮಸ್ಯೆಯಿಂದ, ಪಟ್ಟಣದ ಆಸ್ಪತ್ರೆಯಿಂದ ಬಿಡುಗಡೆಗೊಂಡು ಕಾರವಾರದ ಸಿವಿಲ್ ಆಸ್ಪತ್ರೆಗೆ ತೆರೆಳಿದ್ದ ಎನ್ನಲಾಗಿದ್ದು ಆ ವೇಳೆ ಗಂಟಲು ದ್ರ‍್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು ಎಂದು ತಿಳಿದು ಬಂದಿದೆ.
ತದನಂತರ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಒಯ್ದಿದ್ದು, ಅಲ್ಲಿ ಕರುಳು ಗಡ್ಡೆ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು, ಚೇತರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದ್ದು ಅದಾದ 2-3 ದಿನಗಳಲ್ಲಿ ಮೃತಪಟ್ಟಿದ್ದು , ಮರಣೋತ್ತರ ಪರೀಕ್ಷೆಯಲ್ಲಿ ಸೋಂಕಿನ ಲಕ್ಷಣಗಳು ಧೃಢ ಪಟ್ಟಿದೆ ಎಂದು ಹೇಳಲಾಗಿದೆ. ಅಂಕೋಲಾದ ತೆರಳಿ ಮಣಿಪಾಲದಲ್ಲಿ ಚಿಕಿತ್ಸೆಗೆ ಒಳಪಟ್ಟ ಸುಮಾರು 15 ದಿನಗಳ ಕಾಲಾವಧಿಯಲ್ಲಿ ಸೋಂಕು ಎಲ್ಲಿ ತಗುಲಿತು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ಹಾರವಾಡದ ವ್ಯಕ್ತಿಯಲ್ಲಿಯೂ ಸೋಂಕು: ತಾಲೂಕಿನ ಗ್ರಾಮೀಣ ಪ್ರದೇಶವಾದ ಹಾರವಾಡದ 37ರ ಪುರುಷನೋರ್ವನಲ್ಲಿ ಸೋಂಕು ಧೃಢಪಟ್ಟಿದೆ ಎನ್ನಲಾಗಿದ್ದು ಇದೊಂದು ಸಾಮಾನ್ಯ ಜ್ವರ ಲಕ್ಷಣ (ಐ.ಎಲ್.ಐ) ಮಾದರಿ ಪಾಸಿಟಿವ್ ವರದಿ ಎನ್ನಲಾಗಿದೆ.

ಸೋಂಕು ಲಕ್ಷಣಗಳು ಕಡಿಮೆ ಇರುವ ಇಂತಹ ರೋಗಿಗಳು ಶೀಘ್ರ ಚೇತರಿಸಿಕೊಳ್ಳುವ ಸಾದ್ಯತೆಗಳು ಹೆಚ್ಚಿದೆ. ತಾಲೂಕಿನ ಜನತೆ ಅನಗತ್ಯ ಆತಂಕ ಪಡಬೇಕಿಲ್ಲ. ಜಿಲ್ಲಾಡಳಿತದ ನಿರ್ದೇಶನದಲ್ಲಿ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಂದ ಎಲ್ಲಾ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಜನತೆ ಮೈಮರೆತರೆ ಅಪಾಯದ ಸಾಧ್ಯತೆ ಇರುವುದರಿಂದ ಅದಕ್ಕೆ ಅವಕಾಶವಾಗದಂತೆ ಪ್ರಜ್ಞಾವಂತಿಕೆ ತೋರ್ಪಡಿಸಿ ಆಡಳಿತ ವ್ಯವಸ್ಥೆಗೆ ಸಹಕರಿಸಬೇಕಿದೆ. – ಅಜಿತ್ ಎಮ್, ಉಪವಿಭಾಗಾಧಿಕಾರಿ ಕುಮಟಾ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

(ಜಾಹೀರಾತು) ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version