ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವಿಡ್ ಕುಡಿದು ಬಾಲಕ ಸಾವು

ನೆಲೆದ ಮೇಲೆ ಇಟ್ಟಿದ್ದ ಮಾಸ್ಕಿಟೋ ಲಿಕ್ವಿಡ್ ಕುಡಿದಿದ್ದ ಎರಡು ವರ್ಷದ ಬಾಲಕ

ಹೊನ್ನಾವರ: ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವಿಡ್ ಕುಡಿದು 2 ವರ್ಷದ ಮಗು ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ. ಎರಡು ವರ್ಷದ ಆರವ ಮಹೇಶ್ ನಾಯ್ಕ ಮೃತಪಟ್ಟ ಬಾಲಕ. ಮನೆಯ ನೆಲದ ಮೇಲೆ ಇಟ್ಟಿದ್ದ ಮಾಸ್ಕಿಟೋ ಲಿಕ್ವಿಡ್ ಅನ್ನು ಎರಡು ವರ್ಷದ ಬಾಲಕ ಅಕಸ್ಮಾತಾಗಿ ಕುಡಿದಿದ್ದಾನೆ.

ಗ್ರಾಹಕರ ಸೋಗಿನಲ್ಲಿ ಬಂದು ಮೆಡಿಕಲ್ ಶಾಪ್ ನಲ್ಲಿ ಬುರ್ಖಾಧಾರಿ ಮಹಿಳೆಯರ ಕಳ್ಳತನ: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ನೋಡಿ

ಮಗು ಲಿಕ್ವಿಡ್ ಕುಡಿದ ವಿಷಯ ತಿಳಿದ ತಕ್ಷಣ ಹೆಚ್ಚಿನ ಚಿಕಿತ್ಸೆಗಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಬಾಲಕನನ್ನು ಕಳೆದುಕೊಂಡ ತಂದೆ, ತಾಯಿ, ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version