ದೇವರಾಜ ಅರಸು ಅವರ 107ನೇ ಜನ್ಮ ಜಯಂತಿ‌ ಆಚರಣೆ: ಪ್ರತಿಭಾವಂತ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವ

ಅಂಕೋಲಾ: ಮಾಜಿ ಮುಖ್ಯಮಂತ್ರಿ ದಿವಗಂತ ಡಿ ದೇವರಾಜ ಅರಸು ಅವರ 107ನೇ ಜನ್ಮ ಜಯಂತಿಯನ್ನು ಅಂಕೋಲಾದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಸತಿ ನಿಲಯ ಪಾಲಕಿ ವೀಣಾ ನಾಯಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಭಾರತಿ ನಾಯಕ ಸ್ತಾಗತಿಸಿದರು. ಪುರಸಭೆ ಉಪಾಧ್ಯಕ್ಷೆ ರೇಖಾ ಡಿ ಗಾಂವಕರ ದೀಪ ಬೆಳಗಿ ಕಾರ್ಯಕ್ರಮ ಉದ್ಧಾಟಿಸಿದರು.

ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಗಂಟೆಗಳ ಕಾಲ ವಾಹನದ ಒಳಗೆ ಸಿಲಿಕಿಕೊಂಡು ಒದ್ದಾಡಿದ ಚಾಲಕ

ದಿ . ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಟದಳ ಸಮರ್ಪಿಸಿ ಅತಿಥಿ ಗಣ್ಯರು ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮ ಉದ್ಧಾಟಿಸಿದ ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ ಮಾತನಾಡಿ ಉಳುವವನೇ ಓಡೆಯ ಎಂಬ ಕಾನೂನು ಜಾರಿಗೆ ತಂದು ಬಡವರ ಪರ ಗಟ್ಟಿ ಧ್ವನಿಯಾದ ಡಿ. ದೇವರಾಜ ಅರಸು ಅವರು ನಾಡು ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದರು. ತಹಶೀಲ್ದಾರ ಉದಯ ಕುಂಬಾರ ಮಾತನಾಡಿ “ಹಿಂದುಳಿದ ವರ್ಗಗಳ ಹರಿಕಾರ” ಎಂದು ಕರೆಯಿಸಿಕೊಂಡು, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ನಿಲುವಿನಿಂದ, ಭೂಮಿಯನ್ನು ಬಡವರಿಗೆ ಹಂಚಿ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ ನಾಯಕ ಎಂದರು.

ಪುರಸಭೆಯ ಮುಖ್ಯಾಧಿಕಾರಿ ಎನ್.ಎಮ್.ಮೆಸ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ದಿ.ದೇವರಾಜ ಅರಸುರವರ ಸಾಧನೆಗಳ ಕುರಿತು ಮಾತನಾಡಿ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸುವಂತಾಗಲಿ ಎಂದರು,

ವೇದಿಕೆಯಲ್ಲಿ ಪುರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ‌ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಂದ್ರಹಾಸ ರಾಯ್ಕರ, ನಾಟೀ ವೈದ್ಯ ಹನುಮಂತ ಗೌಡ ಉಪಸ್ಥಿತರಿದ್ದರು.

ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ ನಾಯಕ ದಿ. ಡಿ.ದೇವರಾಜ ಅರಸು ಕುರಿತು ಉಪನ್ಯಾಸ ನೀಡಿದರು.  ವಿದ್ಯಾರ್ಥಿಗಳ ಪರವಾಗಿ ಗಜೇಂದ್ರ ಹರಿಕಾಂತ ಮತ್ತು ನೇತ್ರಾವತಿ ಹರಿಕಾಂತ ದೇವರಾಜ ಅರಸು ಕುರಿತು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಲಾಯಿತು.

ಖಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಧೀಮಂತ ನಾಯಕನ ಸಾಮಾಜಿಕ ನ್ಯಾಯ ಕಲ್ಪನೆ ಮತ್ತು ಅದರಿಂದಾದ ಸಾಮಾಜಿಕ ಬಡಾವಣೆ ಕುರಿತು ಮಾತನಾಡಿದರುವಸತಿ ನಿಲಯದ ಶಿವಾನಂದ ನಾಯ್ಕ ಮತ್ತು ವಿದ್ಯಾರ್ಥಿನಿ ಭಾರತಿ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಹೆಸರಾಂತ ಕೃಷಿಕ ಪೂರ್ಣಾನಂದ ಭಟ್ಟ, ಹಾಸ್ಟೇಲ್ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version