ಅಂಕೋಲಾದ ಓರ್ವ ಸೋಂಕಿತ ಬಿಡುಗಡೆ : ಕೇವಲ 3 ಪ್ರಕರಣಗಳಷ್ಟೇ ಬಾಕಿ

ಸಾವಿರ ದಾಟಿದ ಗಂಟಲುದ್ರವ ಪರೀಕ್ಷೆ
ಇಂದು ಬಂದ 52 ವರದಿ ನೆಗೆಟಿವ್
ಆಶಾ-ಕಾರ್ಯಕರ್ತೆಯರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವ ಡಾ. ಅರ್ಚನಾ

[sliders_pack id=”1487″]

ಅಂಕೋಲಾ : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬುಧವಾರವು ಕೊರೊನಾ ಅಟ್ಟಹಾಸವು ಮುಂದುವರೆದಿದ್ದು ಒಟ್ಟು 76 ಪ್ರಕರಣಗಳು ಧೃಡಪಟ್ಟಿವೆ. ಸುದೈವವಶಾತ್ ಅಂಕೋಲಾದಲ್ಲಿ ಯಾವುದೇ ಹೊಸ ಪ್ರಕರಣಗಳು ಕಾಣಿಸಿಕೊಳ್ಳದೇ ತಾಲೂಕಿನ ಜನತೆ ನೆಮ್ಮದಿಯಿಂದ ಇರುವಂತಾಗಿದೆ.
ತಾಲೂಕಿನಲ್ಲಿ ಈ ಹಿಂದೆ ಒಟ್ಟೂ 21 ಸೋಂಕಿನ ಪ್ರಕರಣಗಳು ಧೃಡಪಟ್ಟಿದ್ದವು. ಮಂಗಳವಾರ ಹಾರವಾಡದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಸಾಮಾನ್ಯ ಜ್ವರ ಲಕ್ಷಣಗಳುಳ್ಳ(ಐ.ಎಲ್.ಐ) ಪಾಸಿಟಿವ್ ಎಂದು ಧೃಡಪಟ್ಟಿದ್ದು ಆತನನ್ನು ಕುಮಟಾದ ಕೋವಿಡ್ ಹೆಲ್ತ್ ಸೆಂಟರ್‍ಗೆ ದಾಖಲಿಸಲಾಗಿದೆ. ಆತನ ಆರೋಗ್ಯ ಶೀಘ್ರ ಚೇತರಿಕೆಯಾಗಿ ಆಸ್ಪತ್ರೆಯಿಂದ ಬೇಗನೆ ಬಿಡುಗಡೆಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ. ತಾಲೂಕಿನ ಇನ್ನೊಂದು ಪ್ರಕರಣದಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಂಕೋಲಾ ಮೂಲದ ವ್ಯಕ್ತಿಯೋರ್ವರ ಮರಣದ ನಂತರ ಖಚಿತವಾದಂತಿದ್ದು, ಈವರೆಗೆ ತಾಲೂಕಿನಲ್ಲಿ ಒಟ್ಟು 23 ಸೋಂಕಿನ ಪ್ರಕರಣಗಳು ಧೃಡಪಟ್ಟಿವೆ.
ಕುಮಟಾ ಕೋವಿಡ್ ಹೆಲ್ತ್ ಸೆಂಟರ್‍ನಿಂದ ಬುಧವಾರ ಅಂಕೋಲಾ ತಾಲೂಕಿನ ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯ ಓರ್ವ ಸೋಂಕಿತ ಗುಣಮುಖನಾಗಿ ಬಿಡುಗಡೆಯಾಗಿದ್ದಾನೆ. ಅಗ್ರಗೋಣ-ಶೇಡಿಕಟ್ಟಾದ 49ರ ಪುರುಷ ಮತ್ತು ಕೋಟೆವಾಡದ 22ರ ಯುವಕ ಸೋಂಕಿನ ಹಿನ್ನಲೆಯಲ್ಲಿ ಕುಮಟಾದ ಕೋವಿಡ್ ಹೆಲ್ತ್ ಸೆಂಟರ್‍ನಲ್ಲಿಯೇ ಚಿಕಿತ್ಸೆಪಡೆಯುತ್ತಿದ್ದು, ಮರು ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಲು ವಿಳಂಭವಾಗುತ್ತಿದೆ ಎನ್ನಲಾಗಿದೆ.

ಸಾವಿರ ದಾಟಿದ ಗಂಟಲು ದ್ರವ ಪರೀಕ್ಷೆ :
ಬುಧವಾರ 28 ಹೊಸ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈವರೆಗೆ ತಾಲೂಕಿನಿಂದ 1017 ಗಂಟಲುದ್ರವ ಪರೀಕ್ಷೆಗೆ ಕಳುಹಿಸಿದಂತಾಗಿದೆ. ಇಂದು ಬಂದ ಎಲ್ಲಾ 52 ವರದಿಗಳು ನೆಗೆಟಿವ್ ಆಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದಾದ್ಯಂತ ಬಹುತೇಕ ಕಡೆ ಆಶಾ-ಕಾರ್ಯಕರ್ತೆಯರು ಮುಷ್ಕರ ನಡೆಸಿದಂತೆ ಕಂಡುಬರುತ್ತಿದೆ. ತಾಲೂಕಾ ವ್ಯಾಪ್ತಿಯಲ್ಲಿಯೂ ಸುಮಾರು 114 ಆಶಾ-ಕಾರ್ಯಕರ್ತೆಯರು ಆರೋಗ್ಯ ಇಲಾಖೆಯೊಂದಿಗೆ ಗುರುತಿಸಿಕೊಂಡು ಕೋವಿಡ್ ವಿರುದ್ದದ ಹೋರಾಟದಲ್ಲಿ ನೈಜ ಸೈನಿಕರಂತೆ ಸೇವೆ ಸಲ್ಲಿಸುತ್ತಿದ್ದು ಸ್ವತಃ ಜಿಲ್ಲಾಧಿಕಾರಿಗಳೇ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ತಾಲೂಕಿನ ಪ್ರಜ್ಞಾವಂತ ನಾಗರಿಕರು, ಹಲವು ಸಂಘ ಸಂಸ್ಥೆಗಳು ನಾನಾ ರೀತಿಯಲ್ಲಿ ಇವರ ಸೇವೆಯನ್ನು ಗುರುತಿಸಿ ಗೌರವಿಸಿವೆ. ಆಶಾ-ಕಾರ್ಯಕರ್ತೆಯರಿಗೆ ಕುಟುಂಬ ನಿರ್ವಹಣೆ ಜವಾಬ್ದಾರಿಯೂ ದೊಡ್ಡದಿದೆ. ತಮ್ಮ ಮತ್ತು ತಮ್ಮ ಸಂಘದ ಒಳಿತಿಗಾಗಿ ಅನಿವಾರ್ಯತೆಯಿಂದ ಮುಷ್ಕರದ ಹಾದಿ ತುಳಿಯಬೇಕಾಗಿದೆ ಎನ್ನಲಾಗಿದೆ. ಆದರೂ ತಾಲೂಕಾ ಆರೋಗ್ಯಾಧಿಕಾರಿ ಡಾ. ಅರ್ಚನಾ ನಾಯ್ಕ ಕುರಿತು ಅಪಾರ ಪ್ರೀತಿ ಹಾಗೂ ಗೌರವ ಹೊಂದಿರುವ ಬಹುತೇಕ ಆಶಾ-ಕಾರ್ಯಕರ್ತೆಯರು ಡಾ. ಅರ್ಚನಾ ನಾಯ್ಕ ಅವರ ಮಾತಿಗೆ ಬೆಲೆಕೊಟ್ಟು ತಾಲೂಕಿನ ಜನತೆಯ ಆರೋಗ್ಯ ಕಾಳಜಿಗೆ ಸೇವೆ ನೀಡಲು ಮುಂದಾಗಿರುವುದು ಶ್ಲಾಘನೀಯ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version