Important
Trending

ನಿಯಂತ್ರಣ ತಪ್ಪಿ ಕಂದಕಕ್ಕೆ ಪಲ್ಟಿಯಾದ ಕಾರು: ಮಗು ಸೇರಿ ಆರು ಮಂದಿಗೆ ಗಾಯ

ಕಾರವಾರಕ್ಕೆ ನಾಟಿ ಔಷಧಿ ತರಲು ತೆರಳುತ್ತಿದ್ದ ವೇಳೆ ದುರ್ಘಟನೆ

ಕುಮಟಾ: ಅತಿವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಗೆ ಡಿಕ್ಕಿಹೊಡೆದು ಹೊಂಡಕ್ಕೆ ಉರುಳಿ ಬಿದ್ದ ಘಟನೆ ರಾಷ್ಟಿçÃಯ ಹೆದ್ದಾರಿ ದುಂಡಕುಳಿಯ ಸಮೀಪ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಕಾರು ಅತಿವೇಗದಿಂದಾಗಿ ದುಂಡಕುಳಿಯ ಸಮೀಪ ನಿಯಂತ್ರಣ ತಪ್ಪಿ, ಸೇತುವೆ ಕೆಳಗೆ ಉರುಳಿಬಿದ್ದಿದೆ. ಗಾಯಾಳುಗಳನ್ನು ಸರ್ಕಾರಿ ತಾಲೂಕಾ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಪ್ರಯಾಣಿಕರ ಟೊಂಪೋ ಮತ್ತು ಕಾರಿನ ನಡುವೆ ಡಿಕ್ಕಿ: 14 ಮಂದಿಗೆ ಗಾಯ

ಕಾರಿನಲ್ಲಿದ್ದ ಪ್ರಯಾಣಿಕರಿಗೆ ತಲೆ, ಕೈ ಸೇರಿ ಹಲವೆಡೆ ಗಂಭೀರ ಗಾಯವಾಗಿದೆ. ಕಾರವಾರಕ್ಕೆ ನಾಟಿ ಔಷಧಿ ಪಡೆಯಲು ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ. ಶಿವಮೊಗ್ಗ ಮೂಲದ ಕಾರಿನ ಚಾಲಕ ಆಯೂಬ್ ಖಾನ್ ಕಡೆಕಲ್, ಅಸ್ಪಾಕ್ ಅಹ್ಮದ್, ಮುಜಾಹಿಲ್ ರಿಜ್ವಾನ್ ತನ್ವಿರ್ ಅಹ್ಮದ್ , ಅಲ್ಮಾಸ್ ಅಹ್ಮದ್ , ಆಯಿಷಾ ಅಹ್ಮದ್ , ಗಾಯಗೊಂಡ ಪ್ರಯಾಣಿಕರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊoಡಿದೆ.

ವಿಸ್ಮಯ ನ್ಯೂಸ್, ಕುಮಟಾ

Back to top button