ಹೊನ್ನಾವರ ಪೊಲೀಸ್ ಠಾಣಿಯ ಪಿಎಸೈ ಆಗಿ ಸಾವಿತ್ರಿ ನಾಯಕ ಅಧಿಕಾರ ಸ್ವೀಕಾರ

ಹೊನ್ನಾವರ: ತಾಲೂಕಿನ ಪೊಲೀಸ್ ಠಾಣಿಯ ಪಿಎಸೈ ಆಗಿ ಸಾವಿತ್ರಿ ನಾಯಕ ಅಧಿಕಾರ ಸ್ವೀಕರಿಸಿದ್ದಾರೆ. ಇವರು 1995ರಂದು ಪೊಲೀಸ್ ಕಾನಸ್ಟೇಬಲ್ ಆಗಿ ಇಲಾಖೆಗೆ ಸೆರ್ಪಡೆಯಾಗಿ ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಜಿಲ್ಲೆಗೆ ಆಗಮಿಸಿ ಹೆಡ್ ಕಾನಸ್ಟೇಬಲ್, ಎಎಸೈ ಆಗಿ ಸಿದ್ದಾಪುರ, ಕುಮಟಾ, ಹೊನ್ನಾವರ, ಕಾರವಾರದಲ್ಲಿ ಸೇವೆ ಸಲ್ಲಿಸಿ ಕರಾವಳಿ ಕಾವಲು ಪಡೆಗೆ ಪಿಎಸೈ ಆಗಿ ಬಡ್ತಿ ಹೊಂದಿದರು. ಇದೀಗ ಮತ್ತೆ ಹೊನ್ನಾವರದಲ್ಲಿ ಪೋಲಿಸ್ ಮತ್ತೆ ಸೇವೆ ಸಲ್ಲಿಸಲು ಆಗಮಿಸಿದ್ದಾರೆ. ಸಾವಿತ್ರಿ ನಾಯಕ ಅವರು ಹೊನ್ನಾವರದಲ್ಲಿ ಕೈಂ ವಿಭಾಗದಲ್ಲಿ ಪಿಎಸೈ ಆಗಿದ್ದಾಗ 25 ಕ್ಕೂ ಅಧಿಕ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version