ರಂಗವೈಭವ ಕಲಾತಂಡದಿಂದ ಯಶಸ್ವಿಯಾಗಿ ನಡೆದ ಯಕ್ಷಗಾನ ಪ್ರದರ್ಶನ

ವಿಷ್ಣುಮೂರ್ತಿ ದೇವಸ್ಥಾನದ ಸಭಾಗ್ರಹದಲ್ಲಿ ಗದಾಪರ್ವ ಯಕ್ಷಗಾನ

ಕುಮಟಾ: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಲಾಗಂಗೋತ್ರಿ (ರಿ) ಕುಮಟಾ ನೇತೃತ್ವದಲ್ಲಿ “ರಂಗವೈಭವ’ ಕಲಾತಂಡದ ಕಲಾವಿದರಿಂದ ಕುಮಟಾ ಉಂಚಗಿಯ ವಿಷ್ಣುಮೂರ್ತಿ ದೇವಸ್ಥಾನದ ಸಭಾಗ್ರಹದಲ್ಲಿ ನಡೆದ ಗದಾಪರ್ವ ಯಕ್ಷಗಾನವು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿ ಕೊಂಡು ನಾಗರ ಹಾವು|ಬುಸ್ ಬುಸ್ ಎನ್ನುತ್ತ ಹೆಡೆ ಎತ್ತಿ ರೋಷ ತೋರಿದ ನಾಗರ ಹಾವು

ವಿಶ್ರಾಂತ ಮುಖ್ಯೋಪಾಧ್ಯಾಯರಾದ ಉಂಚಗಿಯ ಶ್ರೀ ಡಿ.ಜಿ ಶಾಸ್ತ್ರಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಶ್ರೀಯುತ ಗಣೇಶ ಪಟಗಾರ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಲಾಗಂಗೋತ್ರಿಯ ಖಜಾಂಚಿಗಳಾದ ಡಾ. ಜಿ.ಎಸ್. ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಕಾಂತ ಎಮ್ ಶಾಸ್ತ್ರಿ ಸದಸ್ಯರು ಗ್ರಾಮಪಂಚಾಯತ ವಾಲಗಳ್ಳಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ದೇವಸ್ಥಾನದ ಅಧ್ಯಕ್ಷರಾದ ಶ್ರೀ ಜಗದೀಶ ತಮಟಿಯವರು ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಲಾಗಂಗೋತ್ರಿಯ ಗೌರವಾಧ್ಯಕ್ಷ ಶ್ರೀಧರ ಎಮ್ ನಾಯ್ಕ ಉಪಾಧ್ಯಕ್ಷರಾದ ಶ್ರೀ ನಾರಾಯಣ ನಾಗೇಕರ, ಸದಸ್ಯರುಗಳಾದ ಎಮ್.ಟಿ.ನಾಯ್ಕ ವೆಂಕಟೇಶ ಹೆಗಡೆ ಉಪಸ್ಥಿತರಿದ್ದರು. ಊರನಾಗರಿಕರ ಪರವಾಗಿ ಶ್ರೀ ಡಿ.ಜಿ ಶಾಸ್ತ್ರಿಯವರಿಗೆ ಕಲಾಗಂಗೋತ್ರಿ ಪರವಾಗಿ ಸನ್ಮಾನವನ್ನು ಮಾಡಲಾಯಿತು.

ಸಭಾ ಕಾರ್ಯಕ್ರಮದ ನಂತರ ಗದಾಯುದ್ಧ ಯಕ್ಷಗಾನ ಪ್ರದರ್ಶನಕ್ಕೆ ಶ್ರೀ ಗಣಪತಿ ಸುಬ್ರಾಯ ಹೆಗಡೆ (ಧರ್ಮಶಾಲೆ) ಭಾಗವತರಾಗಿ, ಶ್ರೀ ಮಂಜುನಾಥ ಭಂಡಾರಿ ಕಡತೋಕಾ ಮದ್ದಳೆ ಮತ್ತು ಶ್ರೀ ರಾಮನ್ ಹೆಗಡೆ (ಊರಕೇರಿ) ಚಂಡೆವಾದಕರಾಗಿ ಸಮರ್ಥ ಹಿಮ್ಮೇಳವನ್ನು ಒದಗಿಸಿದರು. ಡಾ. ಎಂ.ಆರ್. ನಾಯಕ ಕೌರವನಾಗಿ, ಶ್ರೀ ಗಣೇಶ ಎಸ್. ಭಟ್ಟ ಭೀಮನಾಗಿ, ಶ್ರೀ ಎನ್. ಆರ್. ನಾಯ್ಕ ಧರ್ಮರಾಜನಾಗಿ, ಶ್ರೀ ಗಣೇಶ ನಾಯ್ಕ, ಮುಗ್ವಾ ಸಂಜಯನಾಗಿ, ಶ್ರೀ ಗಣಪತಿ ಆರ್ ಹೆಗಡೆ ಅಶ್ವತ್ಥಾಮ, ಶ್ರೀ ವಿರೇಂದ್ರ ಅಂಕೋಲಾ ಕೃಷ್ಣ, ಕುಮಾರಿ ವೈಷ್ಣವಿ ಅರ್ಜುನ, ಗಣಪತಿ ಹೆಗಡೆ ಸಹದೇವನಾಗಿ ಮತ್ತು ಶ್ರೀ ಸುಬ್ರಹ್ಮಣ್ಯ ಎನ್ ಜೇ. ಅಂಕೋಲಾ ಬೇವಿನಚರನಾಗಿ ಪಾತ್ರವನ್ನು ನಿರ್ವಹಿಸಿದರು. ರಾಮ ಹೆಗಡೆ ಮೂರೂರು ವೇಷಭೂಷಣ ಮತ್ತು ಕೃಷ್ಣ ಗೌಡ ಧ್ವನಿವರ್ಧಕ ವ್ಯವಸ್ಥೆಯನ್ನು ಮಾಡಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಊರನಾಗರಿಕರು ಗದಾಪರ್ವ ಪೌರಾಣ ಕ ಪ್ರಸಂಗದ ನವರಸಗಳನ್ನು ಮೇಲಕುಹಾಕುತ್ತಾ ಅತ್ಯಂತ ವ್ಯವಸ್ಥಿತವಾಗಿ ಸಮರ್ಥ ಹಿಮ್ಮೇಳ ಮತ್ತು ಮುಮ್ಮೇಳದ ಕಲಾವಿದರಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.

ವಿಸ್ಮಯ ನ್ಯೂಸ್ ಕುಮಟಾ

Exit mobile version