ಗಣೇಶೋತ್ಸವ ಸಮಿತಿ ವತಿಯಿಂದ ರಂಗೋಲಿ- ಚಿತ್ರ ಸ್ಪರ್ಧೆ:    ಕಲಾವಿದರ ಕೈಯಲ್ಲಿ ನೈಜವಾಗಿ ಮೂಡಿ ಬಂದ ನಾರಾಯಣ ಗುರುಗಳು

ಅಂಕೋಲಾ: ಗಣೇಶೋತ್ಸವದ ಪ್ರಯುಕ್ತ ನಾಮಧಾರಿ ಸಮಾಜ ಗಣೇಶೋತ್ಸವ ಸಮಿತಿಯ  ವತಿಯಿಂದ ನಾರಾಯಣ ಗುರುಗಳ  ರಂಗೋಲಿ ಚಿತ್ರ  ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ನಾರಾಯಣ ಗುರುಗಳನ್ನು ರಂಗೋಲಿಯಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಿದ ವಿಷ್ಣು ಗೌಡ ಅಂಬಾರಕೊಡ್ಲ ಪ್ರಥಮ, ವಿಘ್ನೇಶ್ವರ ಸುಭಾಷ ನಾಯ್ಕ ದ್ವಿತೀಯ ,ಮಯೂರ ಮಂಗೇಶ ಆಗೇರ ತೃತೀಯ ಬಹುಮಾನ ಪಡೆದುಕೊಂಡರು. 

Narayan Guru

ವಿಜೇತರಿಗೆ ಬಹುಮಾನ ವಿತರಿಸಿದ ನಾಮಧಾರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ನಾಯ್ಕ ಮಾತನಾಡಿ ರಂಗೋಲಿ ಕಲೆ ನಮ್ಮ ಸಂಸ್ಕೃತಿಯ ವಿಶೇಷ ಕಲೆಯಾಗಿದ್ಧು ಕಲಾವಿದರು ತಮ್ಮ ಕೈಚಳಕದಲ್ಲಿ ನಾರಾಯಣ ಗುರುಗಳ ಚಿತ್ರವನ್ನು ಅತ್ಯಂತ ಸುಂದರವಾಗಿ ಅರಳಿಸಿದ್ದಾರೆ ಎಂದರು. 

ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿನ್ನಲೆ ಗಾಯಕ

ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ರಾಜೇಶ ಮಿತ್ರಾ ನಾಯ್ಕ, ಆರ್ಯ ಈಡಿಗ ನಾಮಧಾರಿ ಸಂಘದ ಕಾರ್ಯದರ್ಶಿ  ನಾಗೇಶ ನಾಯ್ಕ, ಎನ್. ಪಿ.ನಾಯ್ಕ ಉಪಸ್ಥಿತರಿದ್ದರು.  ಶಿಕ್ಷಕ ಪ್ರಶಾಂತ ನಾಯ್ಕ ಮತ್ತು ರಾಘವೇಂದ್ರ ಮಹಾಲೆ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಸಮಿತಿ ಪದಾಧಿಕಾರಿಗಳು , ಸದಸ್ಯರು ಸಹಕರಿಸಿದರು.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version