ಉಚಿತ ಕಂಪ್ಯೂಟರ್ ತರಬೇತಿ ಶಿಬಿರ: ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

ಹೊನ್ನಾವರ: ಸ್ಪಂದನ ಸೇವಾ ಟ್ರಸ್ಟ್ (ರಿ) ಹಡಿನಬಾಳ ಇವರ ವತಿಯಿಂದ 3 ತಿಂಗಳುಗಳ ಕಾಲ ನಡೆದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರೌಢಶಾಲೆ ಹಡಿನಬಾಳದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜಕುಮಾರ ಟಿ. ನಾಯ್ಕ ಇವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶದ ಸದ್ಬಳಕೆಯ ಗುಣವನ್ನು ಅಳವಡಿಸಿಕೊಳ್ಳಬೇಕು, ಇದು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗಿರುವುದು. ಕಂಪ್ಯೂಟರ್ ಜ್ಞಾನ ಇಂದಿನ ಜಗತ್ತಿಗೆ ಅತಿ ಅವಶ್ಯ ಎಂದರು. 2019 ರಿಂದ ಇಲ್ಲಿಯವರೆಗೆ ನಾವು ನಮ್ಮ ಶಾಲೆಯ 130 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಸ್ಪಂದನ ಸೇವಾ ಟ್ರಸ್ಟ್ ನಿಂದ ನಿಡಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಕಂದಕ: ಬಾಯ್ತೆರೆದು ಅಪಾಯಕ್ಕೆ ಕಾದಿರುವ ರಸ್ತೆ: ವಾಹನ ಸವಾರರಿಗೆ ಎಚ್ಚರಿಕೆ

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಘವೇಂದ್ರ ಸವೇದ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾದ ಪತಂಜಲಿ ವೆಂಕಟೇಶ ವೀಣಾಕರ್ ಯವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಜೀವನ ಎನ್ನುವುದು ಕಾಲಕಾಲಕ್ಕೆ ಅನೇಕ ತಿರುವುಗಳನ್ನು ಪಡೆಯುವುದು. ಕಷ್ಟ-ಸುಖ ಎರಡೂ ಬರುವುದು. ನಾವು ಕಲಿತ ವಿದ್ಯೆ ಕಷ್ಟಕಾಲದಲ್ಲಿ ನಮಗೆ ಆಧಾರವಾಗುವುದು. ಹಾಗಾಗಿ ಸಂದರ್ಭಕ್ಕೆ ಒದಗುವ ವಿದ್ಯಾರ್ಜನೆಯ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ವೇದಿಕೆಯಲ್ಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ರಾಜೇಶ್ವರಿ ಭಟ್ಟ, ಗಿತಾ ನಾಯ್ಕ ಮತ್ತು ದೈಹಿಕ ಶಿಕ್ಷಕರಾದ ವಿಶ್ವನಾಥ ಗೌಡ ಮತ್ತು ವ್ಯಾಸ ಸೆಂಟರ್ ಆಫ ಎಕ್ಸ್ಲೆನ್ಸನ ಮುಖ್ಯಸ್ತರಾದ ಗಣೇಶ ಅಡಿಗ ಇದ್ದರು. ಸ್ಪಂದನ ಸೇವಾ ಟ್ರಸ್ಟನ ಅಧ್ಯಕ್ಷರಾದ ಗಣಪತಿ ಹೆಗಡೆ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version