ಬ್ಯೂಟಿ ಪಾರ್ಲರ್ ನಲ್ಲಿ ಬೆಂಕಿ ಅವಘಡ: ಪಾರ್ಲರ್ ನವರು ಊಟಕ್ಕೆ ಹೋದಾಗ ಪಾರ್ಲರ್ ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ವಿಷಯ ಮುಟ್ಟಿಸಿದ ಯುವಕ

ಅಂಕೋಲಾ: ಪಟ್ಟಣದ ಅಂಬಾರಕೋಡ್ಲ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಹೊಸ ಕಾಂಪ್ಲೆಕ್ಸ್ ನ ಮೇಲ್ಮಹಡಿಯಲ್ಲಿದ್ದ ಬ್ಯೂಟಿ ಪಾರ್ಲರ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಕಂಡು ಬಂದಿತ್ತು. ಎಂದಿನಂತೆ ಮಧ್ಯಾಹ್ನದ ವೇಳೆ ಬ್ಯೂಟಿ ಪಾರ್ಲರ್ ಬಂದ್ ಮಾಡಿ ಪಾರ್ಲರ್ ನವರು ಊಟಕ್ಕೆಂದು ಮನೆಗೆ ಹೋದ ಸಂದರ್ಭದಲ್ಲಿ ಈ ಬೆಂಕಿ ಅವಘಡ ನಡೆದಿದೆ.

ಆತನ ವಯಸ್ಸು 52, ಯುವತಿಯ ವಯಸ್ಸು 16! ಅಪ್ರಾಪ್ತ ಜೊತೆ ಮದುವೆ: ಮುಂದೇನಾಯ್ತು ನೋಡಿ?

ಬ್ಯೂಟಿ ಪಾರ್ಲರ ನಿಂದ ಹೊರಗಡೆ ಹೊಗೆ ಬರುತ್ತಿರುವುದನ್ನು ಪಕ್ಕದ ಕಾಂಪ್ಲೆಕ್ಸ್ ಬಳಿ ಇದ್ದ ಓರ್ವ ಯುವಕ ಗಮನಿಸಿ ಸಂಬಂಧಿಸಿದವರಿಗೆ ವಿಷಯ ತಲುಪಿಸಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಪರೀಲಿಸಿದರು. ಬ್ಯೂಟಿ ಪಾರ್ಲರ್ ನಲ್ಲಿರುವ ವಿದ್ಯುತ್ತ ಉಪಕರಣವೊಂದರಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಕೇಳಿ ಬಂದಿದ್ದು, ಒಳಗಡೆ ಇದ್ದ ಕೆಲ  ಸಾಮಗ್ರಿಗಳು ಸುಟ್ಟು ಕರಕಲಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಬ್ಯೂಟಿ ಪಾರ್ಲರ್ ನವರು ಒಳಗಡೆ ಇದ್ದ ಕೆಲ ಸಾಮಾಗ್ರಿಗಳನ್ನು ಹೊರ ಸಾಗಿಸಿ, ಅಪಾಯದ ಸಾಧ್ಯತೆ ಕಡಿಮೆಗೊಳಿಸಿದರು.

ಬೆಂಕಿ ಅವಘಡದಿಂದ ಆದ ಹಾನಿ ಅಂದಾಜು ಹಾಗೂ ಬೆಂಕಿ ಆಕಸ್ಮಿಕಕ್ಕೆ ನಿಖರ ಕಾರಣಗಳೇನು ಎಂದು ತಿಳಿದು ಬರ ಬೇಕಿದೆ. ಅದೃಷ್ಟವಶಾತ್ ಬೆಂಕಿ ಪಸರಿಸುವ ವ ಮುನ್ನವೇ ಸ್ಥಳೀಯರ ಗಮನಕ್ಕೆ ಬಂದು ಸಂಭವನೀಯ ಹೆಚ್ಚಿನ ಅನಾಹುತ ತಪ್ಪಿತಾದರೂ, ತಮ್ಮ ಹೊಟ್ಟೆಪಾಡಿನ ನಿತ್ಯದ ವಹಿವಾಟಿಗೆ ಬೆಂಕಿ ಬಿದ್ದಂತಾಗಿ ಬ್ಯೂಟಿ ಪಾರ್ಲರ್ ನವರ ಮನದಲ್ಲಿ  ದುಃಖ ಕಟ್ಟೆಯೊಡೆದು ಕಣ್ಣೀರ ಹನಿ ಸುರಿವಂತೆ ಮಾಡಿದ್ದು, ಅವರನ್ನು ನೋಡಿದ ಆತ್ಮೀಯರು ಹಾಗೂ ಹಿತೈಷಿಗಳು ಪಾಪ ಹೀಗಾಗಬಾರದಿತ್ತು ಎಂದು ಮರುಕಪಟ್ಟರು.                           

ವಿಸ್ಮಯ ನ್ಯೂಸ್ ವಿಲಾಸ ನಾಯಕ  ಅಂಕೋಲಾ

Exit mobile version