ಉಡವನ್ನು ನುಂಗಲು ಪ್ರಯತ್ನಿಸಿದ ಬೃಹತ್ ಗಾತ್ರದ ಕಾಳಿಂಗ ಸರ್ಪ: ಹೇಗಿತ್ತು ನೋಡಿ ಒಂದುವರೆ ಗಂಟೆಯ ಕಾದಾಟ!

ಶಿರಸಿ: ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಪ್ರಯತ್ನಿಸಿ, ವಿಫಲವಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಯಾಣದಲ್ಲಿ ನಡೆದಿದೆ. ಬೃಹತ್ ಕಾಳಿಂಗ ಸರ್ಪ ಮತ್ತು ಉಡ ಒಂದಕ್ಕೊAದು ಮುಖಾಮುಖಿಯಾಗಿದ್ದು, ಈ ವೇಳೆ ಕಾಳಿಂಗ ಉಡವನ್ನು ನುಂಗಲು ಪ್ರಯತ್ನಿಸಿದೆ. ಆದರೆ, ಉಡದ ಗಾತ್ರ ದೊಡ್ಡದಿರುವುದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲು ಸಾಧ್ಯವಾಗಿಲ್ಲ.

ಜೂನಿಯರ್ ನರೇಂದ್ರ ಮೋದಿ: ನೋಡೋಕೆ ಸೇಮ್ ಮೋದಿಯಂತೆ ಕಾಣ್ತಾರೆ ಇವರು!

ಸುಮಾರು ಒಂದು ಗಂಟೆಗೂ ಅಧಿಕ ಕಾಲ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಪ್ರಯತ್ನಿಸಿದೆ. ಆದರೆ ಕೊನೆಗೂ ಸಾಧ್ಯವಾಗಲಿಲ್ಲ. ಹೀಗಾಗಿ ಅರ್ಧ ನುಂಗಿದ ಉಡವನ್ನು ವಾಪಸ್ ಹೊರಹಾಕಿದೆ. ಈ ವೇಳೆ ಉಡ ಸಾವನ್ನಪ್ಪಿದೆ. ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಉಡವನ್ನು ನುಂಗಲು ಪ್ರಯತ್ನಿಸುತ್ತಿರುವ ಬೃಹತ್ ಕಾಳಿಂಗ

ವಿಸ್ಮಯ ನ್ಯೂಸ್, ಶಿರಸಿ

Exit mobile version