Important
Trending

ಫ್ಲೈಓವರ್ ಪಿಲ್ಲರ್‌ಗಳ ಮಧ್ಯದ ಜಾಗದಲ್ಲಿ ಅವಿತು ಕುಳಿತಿದ್ದ ಮಹಿಳೆ: ಕೆಲಸ ಕೊಡಿಸುತ್ತೇವೆಂದು ಹೇಳಿ ಇಲ್ಲಿಗೆ ಕರೆತಂದು ಬಿಟ್ಟ ದುಷ್ಕರ್ಮಿ ಯಾರು?

ಕಾರವಾರ: ಮಹಿಳೆಯೊಬ್ಬಳು ಫ್ಲೈಓವರ್ ನ ಪಿಲ್ಲರ್‌ಗಳ ಮಧ್ಯದ ಜಾಗದಲ್ಲಿ ಅವಿತು ಕುಳಿತಿದ್ದಳು. ಇದನ್ನು ಕಂಡ ಟ್ಯಾಕ್ಸಿ ಚಾಲಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಮಹಿಳೆಯನ್ನ ಸುರಕ್ಷಿತವಾಗಿ ಕೆಳಕ್ಕೆ ಕರೆತಂದಿದ್ದಾರೆ. ಹೌದು, ದಾಬೋಲಿಮ್ ಏರ್ಪೋರ್ಟ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ನ ಮಧ್ಯಭಾಗದಲ್ಲಿ ಕುಳಿತು ಅತಂತ್ರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕಾರವಾರ ಮೂಲದ ಸ್ನೇಹಾ ನಾಯ್ಕ ರಕ್ಷಣೆಗೊಳಗಾದ ಮಹಿಳೆ ಎಂದು ತಿಳಿದುಬಂದಿದೆ.

ರೈಲ್ವೆ ಸುರಂಗ ಮಾರ್ಗದಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ: ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ

ಕೆಲಸ ಕೊಡಿಸುತ್ತೇವೆಂದು ನನ್ನನ್ನ ಯಾರೋ ಒಬ್ಬರು ಇಲ್ಲಿಗೆ ಕರೆತಂದು ಬಿಟ್ಟರು. ಆದರೆ ನನ್ನ ಬಳಿ ಇದ್ದ ಎಲ್ಲವನ್ನೂ ಲೂಟಿ ಮಾಡಿ ಇಲ್ಲಿ ಬಿಟ್ಟು ಹೋದರು. ನನ್ನ ಬಳಿ ಈಗ ಹಣವಿಲ್ಲ. ಇಲ್ಲೇ ಸಮೀಪದಲ್ಲಿ ನಾನು ಕೆಲಸ ಮಾಡುತ್ತಿದ್ದೆ ಎಂದು ಮಹಿಳೆ ಹೇಳಿದ್ದಾಳೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

land for sale

Back to top button