ಅಂಕೋಲಾ: ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಗುತ್ತಿಗೆ ಆದಾರದ ಮೇಲೆ ಕಿರಿಯ ಲೆಕ್ಕ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಂಬಾರ ನಿವಾಸಿ ಮೋಹನ ಮಾಧು ಖಾರ್ವಿ (44) ಅವರು ಅನಾರೋಗ್ಯದಿಂದ ನಿಧನರಾದರು. ಕ್ರಿಯಾಶೀಲ ವ್ಯಕ್ತಿತ್ವದ ಮೋಹನ ಖಾರ್ವಿ ತಮ್ಮ ಕಾರ್ಯ ವೈಖರಿಯಿಂದ ತಾಲೂಕಿನ ಶಿಕ್ಷಕರ ಪ್ರೀತಿ ವಿಶ್ವಾಸಗಳಿಸಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದ ಮೋಹನ ಖಾರ್ವಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
SSLC ಹುಡುಗರಿಂದ ಮೊಬೈಲ್ ಕಳ್ಳತನ: ಖರೀದಿ ನೆಪದಲ್ಲಿ ತೆರಳಿ ಮಾಲೀಕನ ಕಣ್ಣುತಪ್ಪಿಸಿ ಕಳ್ಳತನ
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ್, ಕ್ಷೇತ್ರ ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ವಿ.ನಾಯಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಕಾರ್ಯದರ್ಶಿ ರಾಜು ನಾಯಕ, ಶಿಕ್ಷಣ ಸಂಯೋಜಕ ಬಿ.ಎಲ್. ನಾಯ್ಕ, ರಾಜೇಶ ಸೂರ್ವೆ, ನಿವೃತ್ತ ಶಿಕ್ಷಕ ಎಂ.ಎಸ್. ಶೇಟ್ ಸೇರಿದಂತೆ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು ಮತ್ತು ಹಲವಾರು ಜನರು ಮೃತರ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.
ತಾಲೂಕಿನ ಶಿಕ್ಷಕರು ಮೋಹನ ಖಾರ್ವಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಊರವರು ಹಾಗೂ ಸುತ್ತಲಿನ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದ ವಿಕಲಚೇತನನೊಬ್ಬ ಕಣ್ಮರೆಯಾಗಿದ್ದು, ಆತ ಇನ್ನು ನೆನಪು ಮಾತ್ರ ಎಂಬಂತಾಗಿದೆ. ಆತನ ಅಕಾಲಿಕ ಅಗಲುವಿಕೆಗೆ ಊರವರು, ಆತ್ಮೀಯರು ಮತ್ತು ಗೆಳೆಯರು ಕಂಬನಿ ಮಿಡಿದಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ