ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು: ತೋಟದ ಕೆಲಸಕ್ಕೆಂದು ಹೋದಾಗ ಅವಘಡ

ಕುಟುಂಬಕ್ಕೆ ಆಧಾರಸ್ತಂಭ ಆಗಿದ್ದ ಮನೆಮಗ ಇನ್ನಿಲ್ಲ

ಶಿರಸಿ: ಯುವಕನೋರ್ವ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹುಲೇಕಲ್ ಪಂಚಾಯಿತಿ ವ್ಯಾಪ್ತಿಯ ಬಾದುಂಬೆ ಗ್ರಾಮದ ನಡೆದಿದೆ. ನಗರದ ರಾಘವೇಂದ್ರ ಸರ್ಕಲ್ ಬಳಿ ಚಿಕನ್ ಶಾಪ್ ಇಟ್ಟುಕೊಂಡಿದ್ದ ವ್ಯಾಪಾರ ಮಾಡುತ್ತಿದ್ದ 35 ವರ್ಷದ ಲೋಕೇಶ್ ನಾಯ್ಕ್ ಮೃತಪಟ್ಟ ವ್ಯಕ್ತಿ ಎಂದು ತಿಳಿದುಬಂದಿದೆ. ತೋಟದ ಕೆಲಸಕ್ಕೆಂದು ಹೋದಾಗ ಈ ಅವಘಡ ಸಂಭವಿಸಿದೆ. ಈತನ ಅಕಾಲಿಕ ಮರಣವು ಕುಟುಂಬಕ್ಕೆ ಬರಸಿಡಿಲು ಎರಗಿದಂತಾಗಿದೆ.

SSLC ಹುಡುಗರಿಂದ ಮೊಬೈಲ್ ಕಳ್ಳತನ: ಖರೀದಿ ನೆಪದಲ್ಲಿ ತೆರಳಿ ಮಾಲೀಕನ ಕಣ್ಣುತಪ್ಪಿಸಿ ಕಳ್ಳತನ

 ವಿದ್ಯುತ್ ತಂತಿ ತಗುಲಿ ಯುವಕ ಸ್ಥಳದಲ್ಲೇ ಸಾವು

ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಮಗು ಕೂಡಾ ಇದ್ದು, ಈತನೇ ಸಂಸಾರದ ನೊಗ ಹೊತ್ತಿದ್ದ. ಇದೀಗ ಆಕಸ್ಮಿಕ ನಿಧನ ದಿಂದಾಗಿ ಇಡೀ ಕುಟುಂಬವೇ ಕಂಗಾಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version