ನ್ಯಾಯಾಲಯಕ್ಕೆ ಹಾಜರಾಗದೇ 42 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ | ಪೊಲೀಸರ ಕಾರ್ಯಾಚರಣೆ

ಅಂಕೋಲಾ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ 21 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ಧ ಆರೋಪಿಯನ್ನು ಠಾಣೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ ಸಿಬ್ಬಂದಿಗಳಾದ ಶ್ರೀಕಾಂತ್ ಕಟಬರ್,ಸುರೇಶ್ ಬಳ್ಳೊಳ್ಳಿ,ಮಾರುತಿ ಕೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ಬಿ.ಕೆ.ಹಳ್ಳಿ ಹಳಿಯಾಳ ನಿವಾಸಿ ಹಾಲಿ ಗೋವಾದ ಪಣಜಿಯಲ್ಲಿ ವಾಸವಾಗಿದ್ದ ಚಂದ್ರು ಯಾನೆ ಚಂದ್ರಶೇಖರ ಯಾನೆ ರಾಜು ಲಕ್ಷ್ಮಣ ಬಣಜಿಗಾರ (46) ಬಂಧಿತ ಆರೋಪಿಯಾಗಿದ್ದು 2001 ರಲ್ಲಿ ನಡೆದ ಪ್ರಕರಣದ ಆರೋಪಿಯಾಗಿದ್ದ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ.ಗೋವಾ ಪಣಜಿ ಮೆರ್ಸಿಯಲ್ಲಿ ಆರೋಪಿತನನ್ನು ವಶಕ್ಕೆ ಪಡೆದ ಅಂಕೋಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

42 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ

ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ಕಾರವಾರ ವ್ಯಾಪ್ತಿಯ ಕದ್ರಾ ಪೋಲೀಸರು ಕಳೆದ 42 ವರ್ಷಗಳಿಂದ ತಲೆಮೆರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪತ್ತೆ ಮಾಡಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ ಪೆನ್ನೇಕರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ವಿವಿಧಡೆ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅತೀ ಹಳೆಯ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಸಹ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version