ರೈಲ್ವೆ ನಿಲ್ದಾಣದ ಸಮೀಪ ಇಬ್ಬರು ಗಾಂಜಾ ಮಾರಾಟ: ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿಗಳು

ಹೊನ್ನಾವರ: ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಇಬ್ಬರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೊನ್ನಾವರ ಪೊಲೀಸರು ದಾಳಿ ನಡೆಸಿ ಗಾಂಜಾ ಸಮೇತ ಇಬ್ಬರ ವಶಕ್ಕೆ ಪಡೆದ ಘಟನೆ ನಡೆದಿದೆ. ಹೊನ್ನಾವರ ಕರ್ಕಿ ರೈಲ್ವೆ ನಿಲ್ದಾಣದಲ್ಲಿ ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್ ಪರ್ಮಿಟ್ ಇಲ್ಲದೆ ಅನಧಿಕೃತವಾಗಿ 530 ಗ್ರಾಮ್ ತೂಕದ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದರು.

ನವಿಲನ್ನೇ ನುಂಗಿದ ಬೃಹತ್ ಹೆಬ್ಬಾವು : ಜೀರ್ಣಿಸಿಕೊಳ್ಳಲಾಗದೆ ಹಾವಿನ ಪರದಾಟ : ಅಪರೂಪದ ದೃಶ್ಯ ಕಂಡು ಬೆರಗಾದ ಜನರು

ಈ ಕುರಿತು ಹೊನ್ನಾವರ ಪಟ್ಟಣದ ಲಕ್ಷ್ಮಿನಾರಾಯಣ ನಗರದ ನಾಗರಾಜ ಶಂಕರ ಆಚಾರ್ಯ, ಮುಂಬೈ ಮೂಲದ ಹಾಲಿ ಕಾಸರಕೋಡ ಟೊಂಕ ನಿವಾಸಿ ಸಮೀರ್ ದಾವುದ್ ಶೇಖ್ ಇವರನ್ನು ಬಂಧಿಸಲಾಗಿದೆ. ಹೊನ್ನಾವರ ಸಿಪಿಐ ಶ್ರೀಧರ ಎಸ್ ಆರ್ ಇವರ ಮಾರ್ಗದರ್ಶನದಲ್ಲಿ ಪಿಎಸೈ ಮಹಾಂತೇಶ ನಾಯಕ ಇವರ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಮಹಾವೀರ, ಶ್ರೀಶೈಲ, ಸಂತೋಷ, ಸತೀಶ ಭಟ್, ಮತ್ತಿತರರು ಕಾರ್ಯಚರಣೆಯಲ್ಲಿದ್ದರು. ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version