ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ ಕಡಿಮೆ ಶಾಲೆಯಲ್ಲಿ ಸರಸ್ವತಿ ಪೂಜೆ

ಕುಮಟಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ ಕಡಿಮೆಯಲ್ಲಿ ವರ್ಷಪ್ರತಿಯಂತೆ ಶಾಲಾ ವಿದ್ಯಾರ್ಥಿಗಳಿಂದ ಸರಸ್ವತಿ ಪೂಜೆ ನಡೆಸಲಾಯಿತು. ಅರ್ಚಕರು ಪೂಜಾ ಕಾರ್ಯ ನೆರವೇರಿಸಿಕೊಟ್ಟರು. ನಂತರ ಪ್ರಸಾದ ವಿತರಿಸಲಾಯಿತು. ಸಿಹಿ ಹಂಚಲಾಯಿತು.
ಪೂಜಾ ಕಾರ್ಯದಲ್ಲಿ ಮುಖ್ಯಾಧ್ಯಾಪಕರಾದ ವಿದ್ಯಾ ನಾಯಕ, ಸಹಶಿಕ್ಷಕರಾದ ಉಮಾ ನಾಯ್ಕ, ಲತಾ ಗೌಡ, ದೇವಾಯಿನಿ ನಾಯಕ, ಸರಿತಾ ಆಚಾರಿ, ಹೇಮಾವತಿ ಅಂಬಿಗ, ವೈಶಾಲಿ ನಾಯಕ, ಆನಂದ ನಾಯ್ಕ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿ ಪಾಲಕರು, ಅಂಗನವಾಡಿ ಕಾರ್ಯಕರ್ತರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Exit mobile version