Important
Trending

ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ: ನಗದು ಹಣ ಸೇರಿ ಹಲವು ವಸ್ತುಗಳು ಅಗ್ನಿಗೆ ಆಹುತಿ

ಸಿದ್ದಾಪುರ : ಚಿಕನ್  ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ನಗದು ಹಣ ಹಾಗೂ ವಸ್ತುಗಳು ನಾಶವಾದ ಘಟನೆ ತಾಲೂಕಿನ ಹಲಗೇರಿ ನಡೆದಿದೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದ ಸಿದ್ದಾಪುರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಹತ್ತಿಕೊಂಡು ಉರಿಯುತ್ತಿರುವ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕಸ್ಮಿಕವಾಗಿ ಹೊತ್ತುಕೊಂಡು ಬೆಂಕಿಯಿಂದಾಗಿ ಅಂಗಡಿಯಲ್ಲಿದ್ದ ವ್ಯಾಪಾರವಾದ ನಗದು ಹಣ ಹಾಗೂ ಇನ್ನಿತರ ವಸ್ತುಗಳು ನಾಶವಾಗಿದ್ದು, ಅದೃಷ್ಟವಶಾತ್ ಯಾವುದೇ ಗಾಯ ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ . ಬೆಂಕಿಯು ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸದಂತೆ ತಡೆದಿದ್ದು , ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Related Articles

Back to top button