ಪೋಸ್ಕೋ ಪ್ರಕರಣ ಆರೋಪಿ ಮನೆಯ ಹಿಂಬದಿಯ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಭಟ್ಕಳ: 2014ರ ಪೋಸ್ಕೋ ಆರೋಪಿಯೋರ್ವ
ಮನೆಯ ಹಿಂಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಹಡೀಲ್ ಸಬ್ಬತ್ತಿ ಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಾರಾಯಣ ಈರಪ್ಪ ನಾಯ್ಕ 64 ವರ್ಷ ಎಂದು ಗುರುತಿಸಲಾಗಿದೆ.

ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್: ಸರಣಿ ಅಪಘಾತ: 12ಕ್ಕೂ ಅಧಿಕ ಮಂದಿಗೆ ಗಾಯ

ಈತನ ಮೇಲೆ 2014 ರಲ್ಲಿ ಭಟ್ಕಳ ಗ್ರಾಮೀಣ ಠಾಣೆ ಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದ್ದು, ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯ  ವಿಚಾರಣೆ ನಡೆಯುತ್ತಿದೆ ಈ ವಿಷಯವನ್ನು ಮನಸ್ಸಿಗೆಹಚ್ಚಿಕೊಂಡು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿದ್ದಾನೆ .

ಈತ ಕಳೆದ 15 ದಿನದಿಂದ ತುಂಬಾ ಬೇಸರದಿಂದ ಇದ್ದು, ಜೀವನದಲ್ಲಿ ಜಿಗುಪ್ಪೆಗೊಂಡು
ಮನೆಯ ಹತ್ತಿರದಲ್ಲಿರುವ ಗೇರು ಪ್ಲಾಂಟೇಷನ್‌ನಲ್ಲಿ ಗೇರು ಮರಕ್ಕೆ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಗ್ಗೆ ಭಟ್ಕಳ ಗ್ರಾಮೀಣ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

land for sale
Exit mobile version