Follow Us On

WhatsApp Group
Focus News
Trending

ತಾಳಮದ್ದಳೆ ಸಪ್ತಾಹ ಯಶಸ್ವಿಯಾಗಿ ಸಂಪನ್ನ: ಸಂಘಟನಾ ಕೌಶಲ್ಯಕ್ಕೆ ಮೆಚ್ಚುಗೆ

ಪ್ರೇಕ್ಷಕರನ್ನು ರಂಜಿಸಿದ ಪ್ರಬುದ್ಧ ಕಲಾವಿದರ ಮಾತುಗಾರಿಕೆ

ಕುಮಟಾ: ಪಟ್ಟಣದ ಮಹಾಸತಿ ಸಭಾಭವನದಲ್ಲಿ ಏಳು ದಿನಗಳು ನಡೆದ ತಾಳಮದ್ದಳೆ ಸಪ್ತಾಹ ಯಶಸ್ವಿಯಾಗಿದ್ದು, ಸಂಘಟಕರ ಸಂಗಟನಾ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಯಕ್ಷ ಕೌಮುದಿ ಟ್ರಸ್ಟ್ ಶ್ರೀರಂಗಪಟ್ಟಣ ಹಾಗು ಯುಗಾದಿ ಸಮಿತಿ ಕುಮಟಾದ ಸಹಕಾರದಲ್ಲಿ ಕುಮಟಾ ಪಟ್ಟಣದ ಮಹಾಸತಿ ಸಭಾಭವನದಲ್ಲಿ ಸಂಘಟಿಸಲಾದ ತಾಳಮದ್ದಳೆ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಮುರಳೀಧರ ಪ್ರಭು ಮಾತನಾಡಿ, ತಾಳಮದ್ದಳೆ ಸಪ್ತಾಹವನ್ನು ಯಶಸ್ವಿತಾಗಿ ನಡೆಸಿದ ಗ.ನಾ.ಭಟ್ ಮೈಸೂರು ಅವರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿದ ಬಸ್: ಸರಣಿ ಅಪಘಾತ: 12ಕ್ಕೂ ಅಧಿಕ ಮಂದಿಗೆ ಗಾಯ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ ಎಲ್ ಹೆಗಡೆ ಮಾತನಾಡಿ, ಯಕ್ಷಗಾನ, ತಾಳಮದ್ದಳೆಯಲ್ಲಿ ಅತ್ಯಂತ ಪ್ರಭುದ್ಧ ಕಲಾವಿದರು ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಮುಂದಿನ ತಲೆಮಾರಿನಲ್ಲಿ ಅಂಥ ಕಲಾವಿದರನ್ನು ತಯಾರುಮಾಡುವ ಸವಾಲು ಎದುರಾಗಿದೆ. ಅಂಥ ಮೇರು ಕಲಾವಿದರನ್ನು ನಾವು ಸಿದ್ಧಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಇದೇ ವೇಳೆ, ಭಾಗ್ವತರಾದ ಗೋಪಾಲಕೃಷ್ಣ ಭಟ್ ಕಡತೋಕಾ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ಈ ತಾಳಮದ್ದಳೆಯಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರು ಬಹಳ ಪ್ರಭುದ್ಧರು. ಇಂತ ಪ್ರಬುದ್ಧರ, ಅಪರೂಪದ, ತಾಳಮದ್ದಳೆ ಪ್ರದರ್ಶನ ನೋಡುವುದೆ ಖುಷಿಯ ವಿಚಾರ ಎಂದರು.

ವೇದಿಕೆಯಲ್ಲಿ ನಿವೃತ್ತ ಇಂಜಿನೀಯರ್ ಆರ್.ಜಿ.ಭಟ್ ಇದ್ದರು. ಯಕ್ಷ ಕೌಮುದಿ ಟ್ರಸ್ಟ್ ಅಧ್ಯಕ್ಷ ಗ.ನಾ. ಭಟ್ ಮೈಸೂರು ಅವರು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಮಾರೋಪ ಸಮಾರಂಭದ ಬಳಿಕ ಪ್ರದರ್ಶನಗೊಂಡ ಭೀಷ್ಮಾರ್ಜುನ ಪ್ರಸಂಗ ಪ್ರೇಕ್ಷಕರನ್ನು ರಂಜಿಸಿತು. ಒಟ್ಟಿನಲ್ಲಿ ತಾಳಮದ್ದಳೆ ಸಪ್ತಾಹ ಯಶಸ್ವಿಯಾಗಿ ಸಂಪನ್ನಗೊoಡಿತು.

ವಿಸ್ಮಯ ನ್ಯೂಸ್, ಕುಮಟಾ

Back to top button