ಜನತಾ ವಿದ್ಯಾಲಯ ಕಡತೋಕದ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ: ಸಾಧಕ ಕ್ರೀಡಾಪಟುಗಳಿಗೆ ಅಭಿನಂದನೆ
ಹೊನ್ನಾವರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉತ್ತರ ಕನ್ನಡ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ ಎಸ್.ಡಿ.ಎಮ್.ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2022-23 ನೇ ಸಾಲಿನ ತಾಲೂಕ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಜನತಾ ವಿದ್ಯಾಲಯಕಡತೋಕದ ವಿದ್ಯಾರ್ಥಿಗಳಾದ. ಬಾಲಕಿಯರ ವಿಭಾಗದ ಬಾಲ್ ಬ್ಯಾಡ್ಮಿoಟನ್- ದ್ವಿತೀಯ. (ಶ್ವೇತಾ ಜಿ. ಶೇಟ್, ಅನುರಾಧ ಎಮ್. ಹೆಗಡೆ, ನಾಗಶ್ರೀ ಎಚ್. ಪಟಗಾರ, ಧನ್ಯ ಎ. ಮಡಿವಾಳ, ಐಶ್ವರ್ಯ ಆಯ್. ಮಡಿವಾಳ ಇವರ ತಂಡ) ಸ್ಥಾನ ಪಡೆದು ಶ್ವೇತಾ ಶೇಟ, ಅನುರಾಧ ಹೆಗಡೆ, ನಾಗಶ್ರೀ ಎಚ್. ಪಟಗಾರ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ ಕುಮಾರ, ಕಾರ್ತಿಕ ಎಚ್. ಗೌಡ 100 ಮೀ. ಓಟ – ದ್ವಿತೀಯ & 200 ಮೀ. ಓಟ – ತೃತೀಯ, ಲೋಕೇಶ ಎಸ್. ಗೌಡ 110 ಮೀ. ಹರ್ಡಲ್ಸ್-ಪ್ರಥಮ, ಧಮೇಂದ್ರ ಎಸ್. ಗೌಡ ತ್ರಿವಿಧ ಜಿಗಿತ-ಪ್ರಥಮ, ಕುಮಾರಿ, ದಿವ್ಯ ಎಮ್. ಗೌಡ 100 ಮೀ. ಹರ್ಡಲ್ಸ್- ದ್ವಿತೀಯ, ಹಾಗೂ ಭಟ್ಕಳದಲ್ಲಿ ನಡೆದ 14 ವರ್ಷದೊಳಗಿನವರ ವಿಭಾಗದ ಕ್ರೀಡಾಕೂಟದಲ್ಲಿ ಕುಮಾರಿ, ಶೃತಿಕಾ ಡಿ. ಮುಕ್ರಿ 600 ಮೀ. ಓಟ- ಪ್ರಥಮ, ಸ್ಥಾನ ಪಡೆದು ಅತಿ ಹೆಚ್ಚು ವಿದ್ಯಾರ್ಥಿಗಳು (5 ಜನ) ರಾಜ್ಯಮಟ್ಟಕ್ಕೆ ಆಯ್ಕೆಯಾದ ತಾಲೂಕು & ಜಿಲ್ಲೆಯ ಪ್ರೌಢಶಾಲೆ ಎಂಬ ಹಿರಿಮೆಗೆ ಪಾತ್ರವಾಗಿ ಸಂಸ್ಥೆಯ, ಶಾಲೆಯ, ಊರಿನ, ತಾಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿರುತ್ತಾರೆ.
ಈ ವಿದ್ಯಾರ್ಥಿ/ನಿಯರನ್ನು ನಮ್ಮ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಟ್ರಸ್ಟಿಗಳು, ಶಾಲಾಭಿವೃಧ್ಧಿ ಸಮಿತಿಯವರು, ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮುಖ್ಯ ಶಿಕ್ಷಕರು, ಸಿಭ್ಬಂದಿ ವರ್ಗ, ಪೂರ್ವ ವಿದ್ಯಾರ್ಥಿಗಳು, ಹಾಗೂ ಊರ ನಾಗರಿಕರು, ಕ್ರೀಡಾಪಟುಗಳನ್ನ ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೃಷ್ಣ ಆರ್. ಗೌಡ ಇವರು ತರಬೇತಿಯನ್ನು ನೀಡಿರುತ್ತಾರೆ.
ವಿಸ್ಮಯ ನ್ಯೂಸ್, ಹೊನ್ನಾವರ