ಭಟ್ಕಳ: ದೀಪಾವಳಿಗೆ ಸಾಲು ಸಾಲು ರಜೆ ಬಂದಿರುವುದರಿಂದ ವಿಶ್ವಪ್ರಸಿದ್ಧ ಮುರ್ಡೇಶ್ವರದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಇಲ್ಲಿನ ವಿವಿಧ ಜಲಸಾಹಸ ಕ್ರೀಡೆಗಳನ್ನ ಆಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
ರಸ್ತೆ ದಾಟುತ್ತಿದ್ದ ವೃದ್ಧ ಮಹಿಳೆಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಮಹಿಳೆ ದರ್ಮರಣ
ಈ ಬಾರಿ ದೀಪಾವಳಿ ಹಬ್ಬ ವಾರದ ಆರಂಭದಲ್ಲಿ ಬಂದಿದ್ದು, ಅದಕ್ಕೂ ಮೊದಲು ನಾಲ್ಕನೇಯ ಶನಿವಾರ, ಭಾನುವಾರ ಸಹ ರಜೆ ಇರುವ ಹಿನ್ನಲೆ ಹಬ್ಬದ ಆಚರಣೆಗೆ ಸಾಕಷ್ಟು ರಜೆ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ರಾಜ್ಯ, ಹೊರರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿಯನ್ನ ಗಳಿಸಿರುವ ಮುರ್ಡೇಶ್ವರನ ತಾಣಕ್ಕೆ ಪ್ರವಾಸಿಗರ ದಂಡೇ ಹರಿದುಬಂದಿದೆ.
ಶನಿವಾರದಿಂದಲೇ ಪ್ರವಾಸಿಗರ ಆಗಮನ ಪ್ರಾರಂಭವಾಗಿದ್ದು, ಭಾನುವಾರವಂತೂ ಇಲ್ಲಿನ ಕಡಲತೀರ ಅಕ್ಷರಶಃ ಪ್ರವಾಸಿಗರಿಂದಲೇ ತುಂಬಿ ತುಳುಕುತಿತ್ತು. ಸೋಮವಾರವಾದ ಇಂದು ದೀಪಾವಳಿ ಹಬ್ಬವಾಗಿರುವುದರಿಂದ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿದೆ.
ಇನ್ನು ಮುರ್ಡೇಶ್ವರದಲ್ಲಿ ಮಾತ್ಹೋಬಾರ್ ಮುರ್ಡೇಶ್ವರನ ದೇವಸ್ಥಾನದ ಜೊತೆಗೆ ರಾಜ್ಯದಲ್ಲೇ ಅತೀ ಎತ್ತರದ ಶಿವನ ಬೃಹತ್ ಪ್ರತಿಮೆಯಿದೆ. ಇಲ್ಲಿನ ಕಡಲತೀರದಲ್ಲಿ ಸ್ಪೀಡ್ ಬೋಟ್, ಜೆಟ್ ಸ್ಕೀ, ಬೋಟಿಂಗ್ ಸೇರಿದಂತೆ ರಾಜ್ಯದ ಏಕೈಕ ಸ್ಕೂಬಾ ಡೈವಿಂಗ್ ಜಲಸಾಹಸ ಕ್ರೀಡೆ ಸಹ ಇದೆ. ಹೀಗಾಗಿ ಇಲ್ಲಿಗೆ ಎಂಜಾಯ್ ಮಾಡೋದಕ್ಕೆ ಎಲ್ಲ ರೀತಿಯ ಅನುಕೂಲತೆಗಳು ಸಹ ಇರುವುದರಿಂದ ಮಹಿಳೆಯರು, ಮಕ್ಕಳೆನ್ನದೇ ತಂಡೋಪ ತಂಡವಾಗಿ ಜನತೆ ಇಲ್ಲಿಗೆ ಬಂದು ಕಾಲ ಕಳೆಯುತ್ತಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ದೀಪಾವಳಿ ಹಬ್ಬದ ರಜೆಯ ನಡುವೆ ಪ್ರವಾಸಿ ತಾಣಗಳಿಗೆ ಜನರು ಲಗ್ಗೆಯಿಟ್ಟು ಹಬ್ಬದ ರಜೆಯನ್ನ ಮಜವಾಗಿ ಕಳೆಯಲು ಮುಂದಾಗಿದ್ದು, ಪ್ರವಾಸಿತಾಣಗಳು ಹೌಸ್ ಫುಲ್ ಆಗಿವೆ. ನೀವೂ ಸಹ ಕುಟುಂಬದವರೊಂದಿಗೆ ಎಲ್ಲಿಗೆ ಹೋಗೋದು ಅಂತಾ ಯೋಚಿಸ್ತಾ ಇದ್ರೆ ಮುರ್ಡೇಶ್ವರಕ್ಕೊಮ್ಮೆ ಭೇಟಿ ನೀಡಬಹುದಾಗಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ