ಹೊನ್ನಾವರ: ಮಂಕಿ ಅರಣ್ಯ ವಲಯ ವ್ಯಾಪ್ತಿಯ ಭಟ್ಕಳ ತಾಲೂಕಿನ ಕುಕ್ಕೋಡಿಯಲ್ಲಿ ಅನಧಿಕೃತ ನಾಡ ಬಂದೂಕು ಬಳಸಿ ಕಡವೆಯನ್ನು ಕೊಂದಿರುವ ಪ್ರಕರಣಕ್ಕೆ ಸಂಬoಧ ಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ. ಭಟ್ಕಳ, ಹೆಗಡೆಗದ್ದೆ, ಮಾವಳ್ಳಿ ನಿವಾಸಿ ಪ್ರಕಾಶ ಕೃಷ್ಣ ನಾಯ್ಕ ಬಂಧಿತ ಆರೋಪಿ ಎಂದು ತಿಳಿದುಬಂದಿದ್ದು, ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ರಸ್ತೆ ದಾಟುವ ವೇಳೆ ಡಿಕ್ಕಿಹೊಡೆದ ಸಾರಿಗೆ ಬಸ್ : ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
ಕಾರ್ಯಾಚರಣೆಯಲ್ಲಿ ಡಿ. ಸಿ. ಎಫ್ ರವಿಶಂಕರ, ಸಿ. ಎ. ಸಿ. ಎಫ್ ಕೆ. ಟಿ. ಬೋರಯ್ಯ, ಆರ್. ಎಫ್. ಓ ಸವಿತಾ ಆರ್. ದೇವಾಡಿಗ, ಡಿ. ಆರ್. ಎಫ್. ಓ ಸಂದೀಪ ಮಹಾದೇವ ಮಡಿ, ಯೋಗೇಶ ಡಿ. ಮೋಗೇರ, ಮಂಜುನಾಥ ಆರ್. ನಾಯ್ಕ ಮತ್ತು ಅರಣ್ಯ ರಕ್ಷಕರಾದ ಬಸವರಾಜ ಲಮಾಣಿ, ರಾಮ ನಾಯ್ಕ, ಮಹಾಬಲ ಗೌಡ ಹಾಗೂ ಕ್ಷೇಮಾಭಿವೃದ್ಧಿ ನೌಕರರಾದ ಅನಂತ ನಾಯ್ಕ. ರಾಮಚಂದ್ರ ದೇವಾಡಿಗ, ಅಣ್ಣಪ್ಪ ಹಸ್ಲರ ಇದ್ದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ