ತವರು ಮನೆಯಲ್ಲಿದ್ದ ಮಹಿಳೆ ಹಳ್ಳಕ್ಕೆ ಹಾರಿ ಆತ್ಮಹತ್ಯೆ| ಸಂಸಾರಿಕ ಹಾಗೂ ಆರೋಗ್ಯ ತೊಂದರೆಯಿಂದ ಮನನೊಂದಿದ್ದ ಮಹಿಳೆ
ಅಂಕೋಲಾ: ತವರು ಮನೆಯಲ್ಲಿದ್ದ ಮಹಿಳೆಯೋರ್ವಳು, ಹತ್ತಿರದ ಪೂಜಗೇರಿ ಹಳ್ಳದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ. ಮೃತ ಮಹಿಳೆಯನ್ನು ಸುನೀತಾ ದೀಪಕ ನಾಯ್ಕ (50), ಹಾರವಾಡಾ ಎಂದು ಗುರುತಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಮೂಲತಃ ಲಕ್ಷೇಶ್ವರ – ಕುಂಬಾರಕೇರಿಯವಳಾಗಿದ್ದ ಸುನೀತಾ ವೆಂಕಟ್ರಾಯ ನಾಯ್ಕ ಳನ್ನು ಹಾರವಾಡದ ದೀಪಕ ರಾಮಚಂದ್ರ ನಾಯ್ಕ ಎನ್ನುವ ವ್ಯಕ್ತಿಗೆ ಮದುವೆ ಮಾಡಿ ಕೊಡಲಾಗಿತ್ತಾದರೂ, ತದನಂತರ ಕೆಲ ಸಾಂಸಾರಿಕ ತೊಂದರೆ ಇಂದ ಅತ್ತ ಗಂಡನ ಮನೆಗೆಗೂ ಸರಿಯಾಗಿ ಹೋಗಲಾರದೇ, ತನ್ನ ತವರು ಮನೆಗೆ ಬಂದು ಸಹೋದರಿಯರ ಜೊತೆ ವಾಸವಾಗಿದ್ದಳು ಎನ್ನಲಾಗಿದೆ.
ಆರ್ಥಿಕವಾಗಿ ತೀವ್ರ ಬಡವರಾಗಿದ್ದ ಈಕೆಗೆ ಇತ್ತೀಚಿನ ದಿನಗಳಲ್ಲಿ ಮೂತ್ರ ಪಿಂಡಗಳ ಸಮಸ್ಯೆ ಕಂಡು ಬಂದು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಮನೆಗೆ ಕರೆತರಲಾಗಿತ್ತು.ಗಂಡನ ಮನೆಯಲ್ಲಿ ತಾನಿರದೇ ತನ್ನಿಂದ ತನ್ನ ಸಹೋದರಿಯರಿಗೂ ತೊಂದರೆ ಆಗುತ್ತಿದೆ ಎಂಬ ನೋವಿನಲ್ಲೇ ದಿನಕಳೆಯುವಂತಾಗಿ, ಇದರಿಂದ ಸದಾ ಚಿಂತೆಯಲ್ಲಿ ಇರುತ್ತಿದ್ದ ಈಕೆ ಮೂತ್ರ ಪಿಂಡಗಳ ವೈಫಲ್ಯತೆಗಳ ಕುರಿತು ತಿಳಿದು ಮಾನಸಿಕವಾಗಿ ತೀವ್ರವಾಗಿ ನೊಂದಿದ್ದಳು ಎನ್ನಲಾಗಿದೆ.
ಮಂಗಳವಾರ ಬೆಳಗ್ಗಿನ ಜಾವ ಯಾರಿಗೂ ಹೇಳದೆ ಮನೆಯಿಂದ ಹೊರಟವಳು ಮೃತ ದೇಹವಾಗಿ ಪೂಜಗೇರಿ ಹಳ್ಳದಲ್ಲಿ ಪತ್ತೆಯಾಗುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಮೃತಳ ಸಹೋದರಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯರಾದ ಮಹೇಶ ನಾಯ್ಕ, ಪ್ರಶಾಂತ ನಾಯ್ಕ, ಕಿಶೋರ ನಾಯ್ಕ, ಪ್ರವೀಣ ನಾಯ್ಕ, ದೀಪಕ ನಾಯ್ಕ, ಶೈಲೇಶ ನಾಯ್ಕ ಮೊದಲಾದವರು ಮೃತ ದೇಹವನ್ನು ನೀರಿನಿಂದ ಮೇಲೆತ್ತಿ ಅಂಬುಲೆನ್ಸ್ ಮೂಲಕ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ವಿಜಯ ಕುಮಾರ ನಾಯ್ಕ ಇವರಿಗೆ ನೆರವಾದರು.
ಮರಣೋತ್ತರ ಪರೀಕ್ಷೆ ನಡೆಸಿ,ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಂತರಿಸಲಾಯಿತು.ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ನಾಯಕ,ಪುರಸಭೆ ಸ್ಥಳೀಯ ವಾರ್ಡ್ ಸದಸ್ಯ ಕಾರ್ತಿಕ ನಾಯ್ಕ,ಲಕ್ಷ್ಮೇಶ್ವರ – ಕುಂಬಾರಕೇರಿ ಪೂಜಗೇರಿ – ತೆಂಕಣಕೇರಿ ಭಾಗದ ನೂರಾರು ಜನರು ಅಂತಿಮ ದರ್ಶನ ಪಡೆದುಕೊಂಡರು.
ಹಿರಿಯ ಪತ್ರಕರ್ತ ವಿಠಲದಾಸ ಕಾಮತ,ಮೃತಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಪತಿ ದೀಪಕ ನಾಯ್ಕ, ಹಾರವಾಡಾದ ಸ್ಮಶಾನ ಭೂಮಿಯಲ್ಲಿ ಮಡದಿಯ ಅಂತ್ಯ ಸಂಸ್ಕಾರದ ವಿಧಿ-ವಿಧಾನ ನೆರವೇರಿಸಿದರು. ವಕೀಲ ಸಂತೋಷ ನಾಯ್ಕ ಸೇರಿದಂತೆ ಹಾರವಾಡದ ಸ್ಥಳೀಯರು, ಕುಟುಂಬಸ್ಥರು,ದಿಲೀಪ್ ನಾಯ್ಕ, ನಾಗರಾಜ ಶೆಟ್ಟಿ, ಗೌರೀಶ ಮತ್ತಿತರರು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ