ಹೊನ್ನಾವರ: ಪಟ್ಟಣದ ಎಂ.ಪಿ.ಇ ಸೊಸೈಟಿಯ ಎಸ್.ಡಿ.ಎಂ ಮಹಾ ವಿದ್ಯಾಲಯದ ಕ್ಯಾಶ್ ಮತ್ತು ಮಹಿಳಾ ಘಟಕ ಹಾಗೂ ಲಯನ್ಸ್ ಕ್ಲಬ್ ಹೊನ್ನಾವರ ಇವರ ಸಹಯೋಗದಲ್ಲಿ ಹದಿಹರೆಯದ ಸಮಸ್ಯೆಗಳು ವಿಷಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕಾಲೇಜಿನ ಆರ್ ಎಸ್ ಹೆಗಡೆ ಸಭಾಭವನದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭದ್ರಾವತಿಯ ನಯನ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ. ವೀಣಾ ಎಸ್ ಭಟ್ ವಿದ್ಯಾರ್ಥಿನಿಯರಿಗೆ ವೈದ್ಯಕೀಯ ತಿಳುವಳಿಕೆ ಮೂಡಿಸಿ ಸಂವಾದ ನಡೆಸಿದರು.
5 ಕ್ವಿಂಟಲ್ ಅಡಿಕೆ ಕಳ್ಳತನ: ಮೂವರು ಆರೋಪಿಗಳ ಬಂಧನ
ಎಂ.ಜೆ.ಎಫ್ ಲಯನ್ ಕೆ.ಸಿ.ವರ್ಗಿಸ್, ಎಂ. ಜೆ .ಎಫ್ ಲಯನ್ ರಾಜೇಶ್ ಸಾಲೇಹಿತ್ತಲ್ ಉಪಸ್ಥಿತರಿದ್ದರು. ಕ್ಯಾಶ್ ಕೋ ಆರ್ಡಿನೇಟರ್ ಡಾ ರೇಣುಕಾದೇವಿ ಗೋಳಿಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಮಾರಿ ನಿಹಾರಿಕಾ ಭಟ್ ಪ್ರಾರ್ಥಿಸಿದರೆ ಬಿಕಾಂ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿ ದೀಪಿಕಾ ನಾಯ್ಕ ಸ್ವಾಗತಿಸಿದರು. ಸ್ವಾತಿ ನಾಯ್ಕ್ ಮತ್ತು ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.
ವಿಸ್ಮಯ ನ್ಯೂಸ್, ಹೊನ್ನಾವರ