ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ ಕಡೆಯಿಂದ ಅಂಕೋಲಾ ಪಟ್ಟಣ ಪ್ರವೇಶಿಸುವ ಮಾರ್ಗ ಮಧ್ಯೆ ಎರಡು ಬೈಕ್ ಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ (,KA 30 Q 5231) ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ಸವಾರ ಸ್ಥಳೀಯ ಹೊಸಗದ್ದೆ ಗ್ರಾಮದ ನಿವಾಸಿ, ರೈಲ್ವೆ ಟ್ರ್ಯಾಕ್ ಮನ್ ಆಗಿ ಅಂಕೋಲಾ ರೈಲ್ವೆ ಸ್ಟೇಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾರಾಯಣ ನಾಗು ಗೌಡ ಎನ್ನುವವರ ಬಲಗಾಲು ಮೂಳೆ ಮುರಿತವಾಗಿದ್ದು, ಗಂಬೀರ ಗಾಯಗೊಂಡಿದ್ದು ಕೇರಳದಿಂದ ಗೋವಾಕ್ಕೆ ತನ್ನ ಗೆಳೆಯರೊಂದಿಗೆ ತೆರಳುತ್ತಿದ್ದ ಯಮಹಾ R3 ಮೋಟಾರ್ ಸೈಕಲ್ (KL 13 A 1216 ) ರ ಸವಾರ ಹಮೀಷ ನ ಕೈಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ.
ಬಸ್‌ನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಅಜ್ಜಿ: ಏನಾಯ್ತು?
ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬರದೇ ಇದ್ದುದರಿಂದ ಸ್ಥಳೀಯರ ಸಹಕಾರದಲ್ಲಿ ರಿಕ್ಷಾ ಮೇಲೆ ಇಬ್ಬರು ಗಾಯಾಳುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ತಾಲೂಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾಲು ಮುರಿತ ಮತ್ತು ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡಿರುವ ನಾರಾಯಣಗೌಡ ಈತನನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಲು, ಯೋಗೀಶ ನಾಯಕ ಬಾಸಗೋಡ ಹಾಗೂ ಚಿನ್ನದಗರಿ ಯುವಕ ಸಂಘದವರ ಕರೆಯ ಮೇರೆಗೆ ರಿಕ್ಷಾ ಮಾಲಕ ಬೊಬ್ಬುವಾಡ ನಿವಾಸಿ ಮಹಮ್ಮದ್ ರಫೀಖ್ ಶೇಖ್, ಸಚಿನ್ ನಾಯಕ ಮತ್ತಿತರ ಪೊಲೀಸ್ ಸಿಬ್ಬಂದಿಗಳು, ಸುಜನ ನಾಯಕ , ಸ್ಥಳೀಯರು , ವಿಜಯ ಕುಮಾರ ನಾಯ್ಕ ಕನಸಿಗದ್ದೆ ಮತ್ತಿತರರು ನೆರವಾದರು.
ತಾಲೂಕು ಆಸ್ಪತ್ರೆ ಸಿಬ್ಬಂದಿ ಶಂಕರ ಮತ್ತಿತರರು ಸಹಕರಿಸಿದರು. ಗಾಯಾಳು ಗೌಡ ಇವರಿಗೆ ತಾಲೂಕ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.ಅಪಘಾತದ ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ