ಭಟ್ಕಳದ ಮೂವರು ಮಾಜಿ ಸೈನಿಕರಿಗೆ ಅನ್ಯಾಯ ಆರೋಪ: ಲೈಟ್ ಹೌಸ್ ಎದುರು ಬೃಹತ್ ಪ್ರತಿಭಟನೆ

ಭಟ್ಕಳ: ಮೂವರು ಮಾಜಿ ಸೈನಿಕರಿಗೆ ಂದ ಅನ್ಯಾಯದ ವಿರುದ್ಧ ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಭಟ್ಕಳದ ಲೈಟ್ ಹೌಸ್ ಎದುರು ಬ್ರಹತ್ ಪ್ರತಿಭಟನೆ ನಡೆಸಲಾಯಿತು. ಭಟ್ಕಳದ ಲೈಟ್ ಹೌಸ್ ನಲ್ಲಿ ನಮ್ಮ ಸ್ಥಳೀಯ ಮೂವರು ಮಾಜಿ ಸೈನಿಕರನ್ನು ಯಾವುದೇ ನೋಟಿಸ್ ಇಲ್ಲದೇ ಕೆಲಸದಿಂದ ತೆಗೆದಿರುವುದಲ್ಲದೇ, ಪುನಃ ಅವರನ್ನು ಸೇರಿಸಿಕೊಳ್ಳುವ ಬದಲು ಅವರ ಮೇಲೆ ಹಗೆ ಸಾಧಿಸಲು ಹೊರ ರಾಜ್ಯವಾದ ಕೇರಳದಿಂದ ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ.

ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆ

ಈ ಮೂಲಕ ಕರ್ನಾಟಕದ ಸ್ಥಳೀಯ ಮಾಜಿ ಸೈನಿಕರಿಗೆ ಅನ್ಯಾಯವಾಗುವಂತೆ ಮಾಡಿರುವ ಭಟ್ಕಳ ಲೈಟ್ ಹೌಸ್ ನ ಇನ್ ಚಾರ್ಜ್ ಅನ್ನು ಕೂಡಲೇ ಬದಲಾವಣೆ ಮಾಡುವಂತೆ ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದಿರುವ ನಮ್ಮ ಸ್ಥಳೀಯ ಮಾಜಿ ಸೈನಿಕರನ್ನು ಮರು ನೇಮಕ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ,ಭಟ್ಕಳ

Exit mobile version