ಸಿದ್ದಾಪುರ: ತಾಲೂಕಿನಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ರೈತರು ಆತಂಕಕ್ಕೊಳಗಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟಾವು ಮಾಡಿದ ಬತ್ತದ ಗದ್ದೆಗೆ ನೀರು ನುಗ್ಗಿ ಬತ್ತ ಮತ್ತು ಹುಲ್ಲು ನೀರಿನಲ್ಲಿ ನೆನೆದು ರೈತರು ಬೆಳೆದ ಬೆಳೆಯು ನಷ್ಟವಾಗಿದೆ. ಬತ್ತದ ತೆನೆಗಳನ್ನು ನೀರಿನಿಂದ ತೆಗೆದು ಮೇಲಕ್ಕೆ ಎತ್ತಿ ಇಡುತ್ತಿರುವ ದೃಶ್ಯ ತಾಲೂಕಿನ ಶಿರಳಗಿಯಲ್ಲಿ ಕಂಡು ಬಂದಿದೆ ಸುರಿಯುತ್ತಿರುವ ಮಳೆ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ ಇನ್ನು ಅಡಿಕೆ ಕೊಯ್ಲು ಆರಂಭವಾಗಿದ್ದು ಅಡಿಕೆ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ.
ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾದ ಸ್ಥಿತಿ ನಿರ್ಮಾಣವಾಗಿದೆ ಒಟ್ಟಾರೆ ಸುರಿಯುತ್ತಿರುವ ಮಳೆಯು ರೈತರ ಪಾಲಿಗೆ ಸಂಕಷ್ಟ ತಂದೊಡ್ಡಿದೆ . ಮೋಡ ಕವಿದ ವಾತಾವರಣ ಮುಂದುವರೆದಿದ್ದು ರೈತರಿಗೆ ಇನ್ನಷ್ಟು ಚಿಂತೆ ಕಾಡತೊಡಗಿದೆ.
ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ