ಸಿನಿಮೀಯ ರೀತಿಯಲ್ಲಿ ಬೈಕ್ ಕಳ್ಳತನ: ಬೈಕ್ ಹೇಗಿದೆ ಎಂದು ಟೆಸ್ಟ್ ಡ್ರೈವ್ ತೆಗೆದುಕೊಂಡ ಹೋದ ಯುವಕ ನಾಪತ್ತೆ

ಶೋರೂಂ ಎದುರೇ ನಿಂತು ಬೇರಾವುರೋ ಬೈಕ್ ಕೊಟ್ಟು ಪಂಗನಾಮ ಹಾಕಿದ ಭೂಪ

ಅಂಕೋಲಾ: ಅಪರಿಚತ ಯುವಕನೋರ್ವ , ಹೊಸ ಬೈಕ್ ಹೊಂದಿದ್ದವನನ್ನು ಯಾಮಾರಿಸಲು ನಿನ್ನ ಹೊಸ ಬೈಕ್ ಚೆನ್ನಾಗಿದೆ, ನಾನೂ ಇಂಥಹದೇ ಬೈಕ್ ಖರೀದಿಸಬೇಕೆಂದಿರುವೆ.ಒಂದು ಟೆಸ್ಟ್ ರೈಡ್ ಗೆ ಕೊಡು ಎಂದು ಸುಳ್ಳು  ಹೇಳಿ ರೊಯ್ಯನೆ ಬೈಕ್ ಏರಿ ಹೋದವನು ಮರಳಿ ಬಾರದೇ, ಬೈಕ್ ಕಳೆದುಕೊಂಡ ವ್ಯಕ್ತಿ ಆತಂಕಿತನಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ  ತಾಲೂಕಿನ ಬಾಳೇಗುಳಿಯ ಬೈಕ್  ಶೋ ರೂಮ್  ಒಂದರ ಬಳಿ ನಡೆದ ಈ ಘಟನೆ ಹಲವು  ರೀತಿಯ ಸಂಶಯಗಳಿಗೆ ಕಾರಣವಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮನನೊಂದು ಬಾವಿಗೆ ಹಾರಿ ಸಾವಿಗೆ ಶರಣು

ತಾಲೂಕಿನ ಮಂಜಗುಣಿ ಹೊನ್ನೇಬೈಲ ನಿವಾಸಿ ಹಟ್ಟಿಕೇರಿ ಟೋಲ್ ಗೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ ತಾಂಡೇಲ್ ಎಂಬಾತ  ಕಳೆದ ಒಂದು ವಾರದ ಹಿಂದಷ್ಟೇ ಶಿರಸಿಯಿಂದ  ಕೆಟಿಎಂ ಕಂಪನಿಯ  ಹೊಸ ಡ್ಯೂಕ್ ಬೈಕ್ ಖರೀದಿ ಮಾಡಿದ್ದ. ಶುಕ್ರವಾರ  ತನ್ನ ಕೆಟಿಎಂ ಡ್ಯೂಕ್ ಬೈಕ್ ಮೇಲೆ, ಬಾಳೇಗುಳಿ ಯಮಹಾ ಶೋ ರೂಮ್ ಗೆ ತೆರಳಿ ಅಲ್ಲಿ  ತನ್ನ ಸಹೋದರ ದುರಸ್ತಿಗೆ ನೀಡಿದ್ದ ಯಮಹಾ ಬೈಕ ಬಗ್ಗೆ  ವಿಚಾರಿಸಲು ಹೋಗಿದ್ದ. ಶೋರೂಂ ನಿಂದ ಹೊರ ಬಂದು ತನ್ನ ಡ್ಯುಕ್ ಬೈಕ್ ನ್ನೇರಿ  ಮರಳಿ ಬರುತ್ತಿದ್ದಾಗ, ಅನತಿ ದೂರದಲ್ಲೇ   (ಕೆಎ25 ಎಚ್. ಇ 3649) ನೋಂದಣಿ ಸಂಖ್ಯೆಯ ಹೀರೋ ಸ್ಪ್ಲೆಂಡರ್  ಪ್ಲಸ್ ಬೈಕಿನಲ್ಲಿ ಬಂದು ಎದುರಾದ ಅಪರಿಚಿತ ಯುವಕ ತಾನು ಸಹ ಕೆಟಿಎಂ ಬೈಕ್ ಖರೀದಿ ಮಾಡಬೇಕಿದ್ದು ಒಂದು ಸುತ್ತು ಟ್ರಯಲ್ ನೋಡುವುದಾಗಿ ಕೇಳಿಕೊಂಡಿದ್ದು, ಮೋಸ ಮಾಡಬಹುದೆಂಬ ಅರಿವು ಇಲ್ಲದ ಅರವಿಂದ ಮಂಜುನಾಥ್ ತಾಂಡೇಲ್ , ಅಪರಿಚಿತನ ಕೈಗೆ ತನ್ನ ಹೊಸ ಬೈಕ್  ನೀಡಿದ್ದ  ಎನ್ನಲಾಗಿದೆ.

ಇದೇ ವೇಳೆ ಆ ಅಪರಿಚಿತ ತಾನು ತಂದಿದ್ದ ಹೀರೋ ಹೊಂಡಾ ಬೈಕ್ ಕೀಯನ್ನು ಅರವಿಂದ ತಾಂಡೇಲ  ಬಳಿ ನೀಡಿ , ಹಿರೋ ಹೊಂಡಾವನ್ನು ಅಲ್ಲಿಯೇ ನಿಲ್ಲಿಸಿಟ್ಟು ಹೋಗಿದ್ದರಿಂದ ಅಪರಿಚಿತ ನ ಬಂದೇ ಬರುತ್ತಾನೆ ಎ೦ದು ಕಾದ ಅರವಿಂದಗೆ ತಾನೂ ಏನೋ ಮೋಸ ಹೋದ ಎಂಬ ಭಾವನೆ ಕಾಡಲಾರಂಭಿಸಿದೆ.  ಘಟನೆಯ ಆರಂಭಿಕ ಕೆಲ ದೃಶ್ಯಾವಳಿಗಳು ಬೈಕ್ ಶೋ ರೂಮಿನ ಸಿ.ಸಿ ಟಿವಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.

ಅಪರಿಚಿತ ವ್ಯಕ್ತಿ ಬಿಟ್ಟು ಹೋದ ಬೈಕ್ ಧಾರವಾಡ ಜಿಲ್ಲೆಯ ಗದಗ ವಿಳಾಸ ಹೊಂದಿರುವ ವ್ಯಕ್ತಿಯ ಹೆಸರಿಗೆ ನೋಂದಣಿ ಯಾಗಿದೆ ಎನ್ನಲಾಗಿದ್ದು , ಅದೇ ವಾಹನಕ್ಕೆ ಸಂಬಂಧಿಸಿದ  ವ್ಯಕ್ತಿ ಬಂದು ಈ ಕೃತ್ಯ ಎಸಗಿದನೇ, ಅಥವಾ ಇದನ್ನೂ  ಸಹ ಬೇರೆಡೆಯಿಂದ ಕದ್ದು ಇಲ್ಲವೇ ಯಾಮಾರಿಸಿ ಇಲ್ಲಿ ತಂದು ಇಡುವ ಮೂಲಕ   ಕೃತ್ಯ ಅರಿವಿಗೆ ಬಾರದಂತೆ ದಾರಿತಪ್ಪಿಸಲು , ಯಾರದೋ ಬೈಕನ್ನು ಯಾರಿಗೋ ಕೊಟ್ಟು ತನ್ನ ಚಾಲಾಕಿ ಬುದ್ಧಿ ಪ್ರದರ್ಶಿಸಿದನೇ ಎನ್ನುವ ಮಾತುಗಳು ಕೇಳಿ ಬರಲಾರ೦ಭಿಸಿವೆ.

ಹೆದ್ದಾರಿಯ ಹಲವೆಡೆ ಇರುವ ಚೆಕ್ ಪೋಸ್ಟ್ ಮತ್ತಿತರೆಡೆಯ ಸಿ ಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಚಲನ-ವಲನ ದಾಖಲಾಗಿರುವ ಸಾಧ್ಯತೆ ಇದೆ. ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.ಮೊನ್ನೆ ಮೊನ್ನೆಯಷ್ಟೇ ಅಂಕೋಲಾ ಪೊಲೀಸ್ ಠಾಣೆಯ ಕೂಗುಳ ತೆ ದೂರದಲ್ಲಿ ಕಾರವಾರದ ವಾರ್ ಶಿಪ್ ಮ್ಯೂಸಿಯಂನಲ್ಲಿ ಕೆಲಸ ಮಾಡುವ ಅಂಕೋಲಾ ಮೂಲದ ಟೂರಿಸ್ಟ್ ಗೈಡ್ ಒರ್ವನ ಬೈಕ್ ಕಳ್ಳತನವಾಗಿದ್ದು, ಇಂದಿನ ಬೈಕ್ ಕಳ್ಳತನದ  ಘಟನೆಯೊಂದಿಗೆ ಹಲವು ಅನುಮಾನಗಳಿಗೆ ಕಾರಣವಾಗುತ್ತದೆ. ಪೊಲೀಸರು ತಮ್ಮ ಚಾಣಾಕ್ಷತನದಿಂದ ಈ ಕಳ್ಳತನ ಪ್ರಕರಣಗಳನ್ನು ಭೇದಿಸುವರೆ ಕಾದುನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version