Focus NewsImportant
Trending

ಮನೆಯ ಪಕ್ಕ ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದವನಿಂದ ಮೊಬೈಲ್ ಕಸಿದು ಪರಾರಿಯಾದ ಅಪರಿಚಿತರು!

ಭಟ್ಕಳ: ಆತ ಮನೆಯ ಪಕ್ಕದಲ್ಲೇ ಕುಳಿಯಿದ್ದ. ಹೌದು, ಮನೆಯ ಪಕ್ಕ ಸಮುದ್ರ ತೀರಕ್ಕೆ ಹೊಂದಿಕೊಂಡ ರಸ್ತೆಯಂಚಿನಲ್ಲಿ ಕುಳಿತಿದ್ದ ಯುವಕನ ಕೈಯಲ್ಲಿದ್ದ ಮೊಬೈಲ್‌ ಫೋನ್‌ವೊಂದನ್ನು ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಯುವಕರ ತಂಡವೊಂದು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ನಸ್ತಾರ ಸಮೀಪ ನಡೆದಿದೆ.

ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಮುದ್ರದ ಅಲೆಗೆ ಸಿಲುಕಿ ಸಾವು: ಹೆಚ್ಚುತ್ತಿದೆ ಪ್ರವಾಸಿಗರ ಸಾವಿನ ಸಂಖ್ಯೆ

ಸಮುದ್ರ ತೀರದ ರಸ್ತೆಯಂಚಿನ ಆಸನದಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ವಿವಿಧ ಬೀಚ್‌ಗಳಲ್ಲಿ ಗಾಂಜಾದಂತಹ ಮಾದಕ ವಸ್ತು ಸೇವನೆ ಹೆಚ್ಚಾಗುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಮಾದಕ ವಸ್ತು ಸೇವಿಸಿದ ಯುವಕರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರಬಹುದು ಎನ್ನಲಾಗಿದೆ.

ಮೊಬೈಲ್ ಕಳೆದುಕೊಂಡ ಯುವಕ, ತಾಲೂಕಿನ ಮುಂಡಳ್ಳಿ ಬೇಲೆಗದ್ದೆ ನಿವಾಸಿ ಯಶ್ವಂತ ಈರಯ್ಯ ದೇವಡಿಗ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್ ಭಟ್ಕಳ

Related Articles

Back to top button