Important
Trending

ಶತ ಸಂಭ್ರಮಕ್ಕೆ ತೆರೆದುಕೊಂಡ ಬಾಸಗೋಡ: ಸುಬೋಧ ಯಕ್ಷ ಸಪ್ತಾಹ: ಯಕ್ಷ ಗ್ರಂಥಾಲಯ ಉದ್ಘಾಟನೆ

ರಾಮಾಂಜನೇಯ ಯಕ್ಷ ಪ್ರಸಂಗ ಕಣ್ತುಂಬಿಸಿಕೊಂಡ ರೂಪಾಲಿ

ಅಂಕೋಲಾ: ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದ ತಾಲೂಕಿನ ಬಾಸಗೋಡ ಗ್ರಾಮ, ಕೃಷಿ , ಕಲೆ- ಯಕ್ಷಗಾನ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಧಾರ್ಮಿಕ ಮತ್ತಿತರ ರಂಗಗಳಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಇಲ್ಲಿನ ಅಂದಿನ ಹಿರಿಯರು ಕಟ್ಟಿ ಬೆಳೆಸಿದ ಸುಬೋಧ ಯಕ್ಷಗಾನ (ನಾಟಕ) ಮಂಡಳಿ ಇಂದು ತನ್ನ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 24 ರ ಶುಭ ಸಂಜೆಯಲ್ಲಿ ಶತ ಸಂಭ್ರಮಾಚರಣೆಗೆ ತೆರೆದುಕೊಂಡಿದೆ.

ಶಾಲಾ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಮುದ್ರದ ಅಲೆಗೆ ಸಿಲುಕಿ ಸಾವು: ಹೆಚ್ಚುತ್ತಿದೆ ಪ್ರವಾಸಿಗರ ಸಾವಿನ ಸಂಖ್ಯೆ

ಖ್ಯಾತ ಯಕ್ಷಗಾನ ಕಲಾವಿದ  ಕೆರೆಮನೆ ಶಿವಾನಂದ ಹೆಗಡೆ ಅವರು ನಡುಬೇಣ ಮೈದಾನದ ಪ್ರವೇಶದ್ದಾರವನ್ನು, ಪ್ರದೀಪ ಎಮ್ ನಾಯಕ ಯಕ್ಷ ಗ್ರಂಥಾಲಯವನ್ನು, ಯಕ್ಷ ಸಪ್ತಾಹವನ್ನು ದೀಪ ಬೆಳಗುವ ಮೂಲಕ ಡಾ. ಎನ್ ಆರ್ ನಾಯಕ ವಿದ್ಯುಕ್ತ  ಉದ್ಘಾಟನೆ ಮಾಡಿದರು.   ಜನತಾ ಕ್ರಿಕೆಟ್ ಕ್ಲಬ್ ಅಧ್ಯಕ್ಷ ರಜತ್ ಎಚ್ ನಾಯಕ ಸ್ಥಾಗತಿಸಿದರು. ನಾಗರಾಜ ನಾಯಕ ಆಶಯ ನುಡಿಗಳನ್ನಾಡಿದರು. ವಿಘ್ನೇಶ ಬಿ ನಾಯಕ ನಿರೂಪಿಸಿದರು. ರಾಮಮೂರ್ತಿ ನಾಯಕ ವಂದಿಸಿದರು. ಗಣಪತಿ ಆರ್ ನಾಯಕ (ಭಾಗ್ವತ ಮನೆ ) ಸ್ಥಳೀಯ ಗ್ರಾಪಂ ಸದಸ್ಯ ಲಕ್ಷ್ಮೀಧರ ನಾಯಕ, ಕ್ರಿಕೆಟ್ ಕ್ಲಬ್ ನ ವೈಭವ ಎಲ್ ನಾಯಕ ಉಪಸ್ಥಿತರಿದ್ದರು. ಯಕ್ಷ ಸುಬೋಧ ಪುರಸ್ಕಾರವನ್ನು ಹೊನ್ನಪ್ಪ ನಾಯಕ ವಂದಿಗೆ, ಅನಂತ ಹಾವಗೋಡಿ ಗೋಕರ್ಣ,  ಇವರಿಗೆ ನೀಡಿ ಗೌರವಿಸಲಾಯಿತು. ದೀವಟಿಗೆ ಬೆಳಕಿನ ಮೂಲಕ ನಡುಬೇಣದಲ್ಲಿ ಸಂಚರಿಸಿ ಅಗಲಿದ ಹಿರಿಯರನ್ನು ಸ್ಮರಿಸಿ ಗೌರವಿಸಲಾಯಿತು. ತಿಮ್ಮಣ್ಣ ನಾಯಕ ಸೇರಿದಂತೆ ಊರ ನಾಗರಿಕರು, ಇತರೆ ಗಣ್ಯರು ಪಾಲ್ಗೊಂಡಿದ್ದರು.

 ಸಭಾ ಕಾರ್ಯಕ್ರಮದ ನಂತರ ಖ್ಯಾತ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶಿಸಿದ ರಾಮಾಂಜನೇಯ ಯಕ್ಷಗಾನ ಪ್ರದರ್ಶನವನ್ನು ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವು ಗಣ್ಯರು, ಯಕ್ಷ ಪ್ರೇಮಿಗಳು ಕಣ್ತುಂಬಿಸಿಕೊಂಡರು. ಗ್ರಂಥಾಲಯ ವೀಕ್ಷಿಸಿದ ಶಾಸಕಿ ರೂಪಾಲಿ ನಾಯ್ಕ ಬಾಸಗೋಡ ಊರಿನ ಚರಿತ್ರೆ ಸ್ಮರಿಸಿಕೊಂಡು ಇಲ್ಲಿನ ಸಂಘಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕಿಗೆ ಪುಸ್ತಕ ಗೌರವ ಸಮರ್ಪಿಸಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button