ಸಮುದ್ರದಲ್ಲಿ ಸಿಲುಕಿದ ಪ್ರವಾಸಿಗರ ವಾಹನ: ಕಂಡಕoಡಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಅವಾಂತರ

ಮುರ್ಡೇಶ್ವರ : ಭಟ್ಕಳ ತಾಲೂಕಿನ ಪ್ರವಾಸಿ ಕೇಂದ್ರವಾದ ಮುರ್ಡೇಶ್ವರದಲ್ಲಿ ದಿನ ಕಳೆದಂತೆ ಪ್ರವಾಸಿಗರ ಸಂಖ್ಯೆ ಮಿತಿ ಮಿರುತ್ತಿದ್ದು ಟ್ರಾಫಿಕ್ ಸಮಸ್ಯೆಯೂ ಸಾರ್ವಜನಿಕರನ್ನು ಹೈರಾಣಾಗಿಸುತ್ತಿರುವ ಬೆನ್ನಲ್ಲೇ ಕೆಲವು ಪ್ರವಾಸಿಗರ ಹುಚ್ಚುತನ ಕೂಡ ಲೈಫ್ ಗಾರ್ಡಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಈಶ್ವರನ ದರ್ಶನ ಪಡೆದು ಸಮುದ್ರ ವಿಹಾರಕ್ಕೆ ತೆರಳುವ ಪ್ರವಾಸಿಗರು ಸ್ವಲ್ಪ ಸಮಯ, ಸಂತೋಷದಿoದ ಕಾಲ ಕಳೆಯಲು ಬಯಸುತ್ತಾರೆ. ಬೋಟಿಂಗ್ ಹೋಗಲು, ಕುದುರೆ ಸಪಾರಿ, ಬೋಟ್ ರೈಡಿಂಗ್ ಹೋಗಲು ಮುಗಿ ಬಿಳುತ್ತಿದ್ದಾರೆ.’

ಬೈಕ್ ಸಾಲ ತೀರಿಸಲು ದರೋಡೆಗೆ ಇಳಿದ ಯುವಕರು: ಶೋಕಿಗಾಗಿ ಕಳ್ಳತನದ ಕಸುಬು

ಇದೇ ವೇಳೆ, ಸಂಜೆ ಮುರ್ಡೇಶ್ವರದ ಕಡಲತೀರದಲ್ಲಿ ನಿಲ್ಲಿಸಿಟ್ಟಿದ್ದ ಪ್ರವಾಸಿಗರೊಬ್ಬರ ವಾಹನ ಸಮುದ್ರದಲ್ಲಿ ಸಿಲುಕಿದ ಘಟನೆ ನಡೆದಿದೆ. ನಂತರ ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲಕ್ಕೆ ಎತ್ತಲಾಯಿತು. ಪ್ರವಾಸಿಗರೂ ವಾಹನಗಳನ್ನು ಆದಷ್ಟು ಪಾರ್ಕಿಂಗ್ ನಲ್ಲಿ ನಿಲ್ಲಿಸುತ್ತಿಲ್ಲ. ಕಡಲತೀರದಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ಈ ರೀತಿಯ ಅವಘಡಗಳು ಸಂಭವಿಸುತ್ತಿದೆ. ಇನ್ನೂ ಕೆಲವರು ಸಮುದ್ರದಲ್ಲಿ ಈಜಾಡಿ ಖುಷಿ ಪಡುವವರಿಗೆ ಅಲೆಯ ಯಾವುದೇ ಮುನ್ಸೂಚನೆ ಗೊತ್ತಿರುವುದಿಲ್ಲ.

ಪ್ರವಾಸಿಗರಿಗೆ ಲೈಫ್ ಗಾರ್ಡ್ ಗಳು ಮುಂಜಾಗ್ರತಾ ಕ್ರಮವನ್ನು ಮೈಕ್ ಮೂಲಕ ಪದೇ ಪದೇ ಹೇಳುತ್ತಿದ್ದರು ಪ್ರವಾಸಿಗರು ಲೈಫ್ ಗಾರ್ಡ್ ಗಳ ಮಾತು ಮೀರಿ ಅಪಾಯವಿರುವ ಕಡೆ ತೆರಳುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version