Focus News
Trending

ಸಿದ್ದಾಪುರ ತಾಲೂಕಿನ ಬಿಳಗಿ ದುರ್ಗಾಂಬಿಕಾ ದೇವಿಯ ಜಾತ್ರಾಮಹೋತ್ಸವ

ಸಿದ್ದಾಪುರ: ತಾಲೂಕಿನ ಬಿಳಗಿ ದುರ್ಗಾಂಬಿಕಾ ದೇವಿಯ ಜಾತ್ರಾಮಹೋತ್ಸವ ಜ.27ರಿಂದ ಫೆ.4ರವರೆಗೆ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಶಿಸ್ತುಬದ್ಧವಾಗಿ ನಡೆಸಲು ಎಲ್ಲ ರೀತಿಯ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ದೇವಾಲಯದ ಅಧ್ಯಕ್ಷ ಡಾ.ರವಿ.ಹೆಗಡೆ ಹೂವಿನಮನೆ ಹೇಳಿದರು. ಬಿಳಗಿಯ ದುರ್ಗಾಂಬಿಕಾ ದೇವಾಲಯದಲ್ಲಿ ಜಾತ್ರಾಮಹೋತ್ಸವದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ಜಾತ್ರೆ ಪೂರ್ವತಯಾರಿಯಾಗಿ ಈಗಾಗಲೇ ಪೊಲೀಸ್, ಕಂದಾಯ, ಆರೋಗ್ಯ, ಸ್ಥಳೀಯ ಗ್ರಾಪಂನೊoದಿಗೆ ಸಭೆ ನಡೆಸಲಾಗಿದೆ. ವಿಶೇಷವಾಗಿ ಸ್ವಚ್ಛತೆ ಕುರಿತು ಹೆಚ್ಚು ಗಮನ ನೀಡಲಾಗುತ್ತಿದೆ.

ಜಾತ್ರಾ ಸಮಿತಿಯವರೊಂದಿಗೆ ಭಕ್ತರು ಸಹ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಅಲ್ಲದೇ ಪ್ಲಾಸ್ಟಿಕ್ ಮುಕ್ತ ಜಾತ್ರೆ ನಡೆಸುವುದಕ್ಕೆ ಎಲ್ಲರೂ ಸಹಕರಿಸಬೇಕು. ಅಶ್ಲೀಲ ಹಾಗೂ ಜೂಗಾರಿ ಚಟುವಟಿಕೆಗಳಿಗೆ ಜಾತ್ರಾ ಸಮಿತಿಯವರು ಹಾಗೂ ಗ್ರಾಮಸ್ಥರು ಅವಕಾಶ ನೀಡುವುದಿಲ್ಲ ಎಂದು ಹೇಳಿದರು .

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button