ಕುಮಟಾ: ಮಾದೇವ ಜಟ್ಟಪ್ಪ ನಾಯ್ಕ ಬಗ್ಗೋಣ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗ್ಗೋಣ ಬಡ ಕುಟುಂಬದಲ್ಲಿ ಶ್ರಿಮತಿ ಕನ್ನೆ ಮತ್ತು ಜಟ್ಟಪ್ಪ ದಂಪತಿಯ ಹಿರಿಯ ಮಗನಾಗಿ 15 ಮೇ 1945 ರಂದು ಜನಿಸಿ ಇವರು ಯಕ್ಷಗಾನದ ಕಲಾಸಕ್ತಿಯನ್ನು ಬೆಳೆಸಿಕೊಂಡವರು. ಯಕ್ಷಗಾನದ ಕಲೆಯ ಪ್ರಖ್ಯಾತಿಗಾಗಿ ತೆರೆಯ ಮರೆಯಲ್ಲಿ ಸೇವೆ ಸಲ್ಲಿಸಿದ ಇವರು ಚೌಕಿ ಮನೆಯಲ್ಲಿ ವಸ್ತ್ರಾಂಲಕಾರ ಸಹಾಯಕರಾಗಿ ತನ್ನ ಕಲಾಸೇವೆ ಪ್ರಾರಂಭಿಸಿ ವಸ್ತ್ರಾಂಲಕಾರ ಪ್ರಾವೀಣ್ಯತೆ ಹೊಂದಿದರು, ಇವರು ಕುಮಟಾ ಉತ್ತಮ ನಾಯ್ಕರ ಬಯಲಾಟ ಮೇಳ, ನಂತರ ಕುಮಟಾ ಗೋವಿಂದ ನಾಯ್ಕರ ಮೇಳ, ಶಿರಸಿ ಮೇಳ, ಬಳಿಕ ಪೆರ್ಡೂರು ಮೇಳ ಹೀಗೆ 45 ವರ್ಷಗಳಿಂದ ಕಲಾವಿದರಿಗೆ ವೇಷ ಭೂಷಣ ಕಟ್ಟುವ ಕಲಸ ಮಾಡುತ್ತಾ ಕಲಾವಿದರ ಜೊತೆಗೆ ಮುಂಬಯಿ, ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಿಗೆ ಮೇಳದ ಕಲಾವಿದರಿಗೆ ವೇಷಭೂಷಣ ಕಟ್ಟುವ ಕೆಲಸ ಮಾಡಿದರು ಇವರ ಈ ಕಲಾಸೇವೆಗೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದರು.
2019 ರ ದಿವಂಗತ ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಪಡೆದು ಕೊಂಡಿದ್ದರು ಇವರು ಕಳೆದ ನಾಲ್ಕೂ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಿನ್ನೆ ದಿನಾಂಕ 28-01-2023 ಶನಿವಾರ ಮಧ್ಯಾಹ್ನ 1-30 ಕ್ಕೆ ನಿಧನರಾಗಿದ್ದಾರೆ ಇವರು ಪತ್ನಿ ಸೇರಿದಂತೆ ಅಪಾರ ಭಂದುಗಳನ್ನು ಅಗಲಿದ್ದಾರೆ ಹಿರಿಯ ಕಲಾವಿದ ಗೋಪಾಲ ಆಚಾರಿ ತೀರ್ಥಹಳ್ಳಿ, ನೀಲಕೋಡ ಶಂಕರ ಹೆಗಡೆ, ಗಣಪತಿ ನಾಯ್ಕ ಕುಮಟಾ, ರಮೇಶ ಭಂಡಾರಿ ಮೂರೂರು ಸೇರಿದಂತೆ ಅನೇಕ ಯಕ್ಷಗಾನ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ