ಪೊಲೀಸ್ ಅಧಿಕಾರಿಗಳ ವರ್ಗಾವಣೆ |ಪರಿಷ್ಕೃತ ಆದೇಶದಿಂದ ಸ್ಥಳ ಬದಲಾವಣೆ

ಅಂಕೋಲಾದ ಅಂಕೋಲಾ: ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯ ಆದೇಶದಲ್ಲಿ , ಪರಿಷ್ಕೃತ ಆದೇಶದಂತೆ (ಈ ಹಿಂದಿನ ಆದೇಶ ಕೊಂಚ ಬದಲಾವಣೆ ಮಾಡಲಾಗಿದ್ದು ) ಅಂಕೋಲಾದ ನೂತನ ಪೊಲೀಸ್ ನಿರೀಕ್ಷಕರಾಗಿ ರಾಬರ್ಟ್ ಜಾಕ್ಸನ್ ಡಿಸೋಜ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಅಂಕೋಲಾದಲ್ಲಿ ಪೊಲೀಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂತೋಷ ಶೆಟ್ಟಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ನಿರೀಕ್ಷಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಈ ಹಿಂದಿನ ವರ್ಗಾವಣೆ ಆದೇಶದಲ್ಲಿ ಅವರು ಸುಳ್ಯ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು.

ಇದೇ ವೇಳೆ ಅಂಕೋಲಾ ಪೊಲೀಸ್ ನಿರೀಕ್ಷಕರಾಗಿ ಈ ಹಿಂದಿನ ವರ್ಗಾವಣೆ ಆದೇಶದಲ್ಲಿರುವ ಕಡೂರು ವೃತ್ತ ನಿರೀಕ್ಷಕ ಶಿವಕುಮಾರ್ ಅವರನ್ನು , ಪರಿಷ್ಕೃತ ವರ್ಗಾವಣೆ ಆದೇಶದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
*ಕಾರವಾರದ ಹೆಸ್ಕಾಂ ಜಾಗೃತದಳದ ನಿರೀಕ್ಷಕರಾಗಿದ್ದ ರಾಬರ್ಟ್ ಡಿಸೋಜ ಅವರು ಅಂಕೋಲಾದ ನೂತನ ಪೊಲೀಸ್ ನಿರೀಕ್ಷಕರಾಗಿ ಫೆ 1ರ ಬುಧವಾರ ಸಾಯಂಕಾಲ ಅಧಿಕಾರ ವಹಿಸಿಕೊಂಡರು.

ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಪ್ರವೀಣ್ ಕುಮಾರ್ ಆರ್ ಅವರೂ ಸಹ ವರ್ಗಾವಣೆಗೊಂಡು ಬಂಧವಾರ ಬೆಳಿಗ್ಗೆ ಹೊನ್ನಾವರ ಪಿಎಸ್ಐ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಾರವಾರ ನಗರ ಠಾಣೆಯ ಪಿಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ ಕಾಂಬಳೆ ಗುರುವಾರ ಬೆಳಿಗ್ಗೆ ಅಂಕೋಲಾದ ಪಿಎಸ್ಐ ಆಗಿ (ಪ್ರವೀಣ ಕುಮಾರ ಅವರ ತೆರವಾದ ) ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version