ಗುಡ್ನಾಪುರದ ರವಿವರ್ಮನ ಅರಮನೆ ಆವರಣದಲ್ಲಿ ಕದಂಬಜ್ಯೋತಿ ಉದ್ಘಾಟನೆ

ಶಿರಸಿ: ನಾಡಿ ನುಡಿ ಯನ್ನು ಇಮ್ಮಡಿಗೊಳಿಸುವ ಉತ್ಸವ ಕದಂಬೊತ್ಸವ ವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ತಾಲೂಕಿನ ಗುಡ್ನಾಪುರ ದ ರವಿವರ್ಮನ ಅರಮನೆ ಆವರಣದಲ್ಲಿ ನಡೆದ ಕದಂಬಜ್ಯೋತಿ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಕದಂಬಜ್ಯೋತಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಚರಿಸಿ ಫೆ.28ರಂದು ಬನವಾಸಿ ತಲುಪುತ್ತದೆ. ಮೊಟ್ಟಮೊದಲ ಬಾರಿಗೆ ಗುಡ್ನಾಪುರದ ರಾಣಿ ಅಂತಃಪುರ ದಲ್ಲಿ ಕಾರ್ಯಕ್ರಮ ವನ್ನು ಐದು ವರ್ಷಗಳ ಹಿಂದೆ ಪ್ರಾರಂಭ ಮಾಡಿದ್ದೆವೆ.ಇದರಿಂದ ಗುಡ್ನಾಪುರ ಕ್ಕೂ ಮೆರಗು ತಂದoತಾಗಿದೆ. ಪಂಪಮಹಾಕವಿ ಬನವಾಸಿ ಯ ನೆಲವನ್ನು ಬಹಳ ಸುಂದರವಾಗಿ ಕೊಂಡಾಡಿದ್ದಾನೆ. ಕದಂಬರು ಬನವಾಸಿ ಯನ್ನೇ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರು ಎಂದರು.

476ವರ್ಷಗಳ ಹಿಂದೆ ಮಾಡಿದ ಮಧುಕೇಶ್ವರ ದೇವರ ರಥ ಶಿಥಿಲಾವಸ್ಥೆ ಹೊಂದಿತ್ತು.ಅದಕ್ಕಾಗಿ ಹೊಸ ರಥವನ್ನು ನಿರ್ಮಾಣ ವಾಗಿ ಮಹಾಸ್ಯಂದನ ರಥಬನವಾಸಿ ಯನ್ನು ತಲುಪಿದೆ.28ರಂದು ಮುಖ್ಯಮಂತ್ರಿ ಗಳು ಮಹಾರಥವನ್ನು ದೇವಸ್ಥಾನ ಕ್ಕೆ ಸಮರ್ಪಣೆ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಬಹಳ ವಿಜೃಂಭಣೆಯಿoದ ಕದಂಬೊತ್ಸವ ಕ್ಕೆ ಸಿದ್ದತೆ ಮಾಡಿದ್ದಾರೆ. ಪುರಾತತ್ವ ಇಲಾಖೆ ಕದಂಬರ ನಾಡಿನ್ನು ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ.ಮುಂದಿನ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲಿ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ ಕನ್ನಡ ನಾಡಿನ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದವರು ನಮ್ಮ ಕದಂಬರು. ಜಿಲ್ಲಾಡಳಿತ ಪಾಲಿಗೆ ಶಿವರಾಮ ಹೆಬ್ಬಾರ ಅವರು ಕುಬೇರರಂಥೆ ಕಾಣುತ್ತಿದ್ದಾರೆ.ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಅನುದಾನ ವನ್ನು ಅತೀ ಶೀಘ್ರದಲ್ಲಿ ಸರ್ಕಾರದಿಂದ ತಂದಿದ್ದಾರೆ. ಇದು ಕೇವಲ ಸರ್ಕಾರದ ಉತ್ಸವವಾಗದೇ ಸಾರ್ವಜನಿಕ ಉತ್ಸವವಾಗಿ ವಿಜೃಂಭಣೆಯಿoದ ನಡೆಯಲು ಎಲ್ಲಾರೂ ಸಹಕರಿಸಬೇಕು ಎಂದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version