ಅಂಕೋಲಾ: ಶಿಕ್ಷಕಿಯೋರ್ವಳು ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಹೊಸ್ಕೇರಿಯಲ್ಲಿ ಸಂಭವಿಸಿದೆ. ಹೊಸ್ಕೇರಿ ಬಿಳಿಗಿರಿಯಮ್ಮ ದೇವಾಲಯದ ಸಮೀಪದ ನಿವಾಸಿ ಲಕ್ಷ್ಭೀ ನಾರಾಯಣ ಪಟಗಾರ (54) ಮೃತ ಮಹಿಳೆಯಾಗಿದ್ದು ಪಟ್ಟಣದ ಅಜ್ಜಿಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಇತ್ತೀಚಿನ ಕೆಲವು ದಿನಗಳಿಂದ ಸಕ್ಕರೆ ಕಾಯಿಲೆ ಉಲ್ಬಣಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ( ಇ ಎಲ್ )ರಜೆಯ ಮೇಲೆ ಮನೆಯಲ್ಲೇ ಇದ್ದರು.
35 ಅಡಿ ಆಳದ ಬಾವಿಗೆ ಬಿದ್ದ ಯುವತಿ: ಪ್ರಾಣ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ
ಶುಕ್ರವಾರ ಮದ್ಯಾಹ್ನ ಯಾವುದೋ ಕಾರಣದಿಂದ ಪಕ್ಕದ ಮನೆಯ ಬಾವಿಯ ಬಳಿ ಹೋದವರು ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟಿರುವುದಾಗಿ ಹೇಳಲಾಗುತ್ತಿದೆ.ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದರು. ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಶಿಕ್ಷಕಿಯ ಅಕಾಲಿಕ ನಿಧನಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ನಾಯಕ್ ಹೊಸ್ಕೇರಿ ಸೇರಿದಂತೆ ಇತರರು, ಹಾಗೂ ಊರ ನಾಗರಿಕರು ಹಾಗೂ ಇತರೆ ಗಣ್ಯರು,ಅಜ್ಜಿಕಟ್ಟ ಶಾಲೆಯ ಮುಖ್ಯಾಧ್ಯಾಪಕರು, ಸಹೋದ್ಯೋಗಿಗಳು. ಎಸ್. ಡಿ. ಎಮ್.ಸಿ ಯವರು ಸಂತಾಪ ಸೂಚಿಸಿದ್ದಾರೆ. ಶನಿವಾರ ಬೆಳಿಗ್ಗೆ ಸ.ಹಿ.ಪ್ರಾ ಶಾಲೆ ಅಜ್ಜಿಕಟ್ಟಾದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಎಸ್. ಡಿ.ಎಮ್. ಸಿಯವರು ಹಾಗೂ ಬೋಧಕೇತರ ಸಿಬ್ಬಂದಿಗಳು ಸೇರಿ ಮೌನಾಚರಣೆ ನಡೆಸಿ ಶೃದ್ಧಾಂಜಲಿ ಸಲ್ಲಿಸುವ ಮೂಲಕ,,ಅಕಾಲಿಕ ನಿಧನರಾದ ಲಕ್ಷ್ಮಿ ಪಟಗಾರ ಇವರ ಆತ್ಮಕ್ಕೆ ಶಾಂತಿ ಕೋರಿದರು. ಶೋಕದ ಹಿನ್ನಲೆಯಲ್ಲಿ ಶಾಲೆಗೆ ಈ ದಿನ ಬಿಡುವು ನೀಡಲಾಗಿದ್ದು,ಮುಂದಿನ ದಿನಗಳಲ್ಲಿ ಪಠ್ಯಕ್ರಮವನ್ನು ಸರಿದೂಗಿಸಿಕೊಳ್ಳಲಾಗುವುದು ಎ೦ದು ಶಾಲಾ ಮುಖ್ಯಾಧ್ಯಾಪಕರು ತಿಳಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ