ಶಿರಸಿ: ಯೋಗ ನಮ್ಮ ಜೀವನದ ಬಹುಮುಖ್ಯ ಹವ್ಯಾಸ ವಾಗಬೇಕು.ಯೋಗವನ್ನು ಸತತವಾಗಿ ದೀರ್ಘಕಾಲ ಮಾಡುವುದರಿಂದ ನಮಗೆ ಉತ್ತಮ ಪರಿಣಾಮ ತಿಳಿಯುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಗಳು ನುಡಿದರು. ಅವರು ಯೋಗಮಂದಿರದ ಇಪ್ಪತ್ತಾರನೇ ವಾರ್ಷಿಕೋತ್ಸವದಲ್ಲಿ ಆಶೀರ್ವದಿಸಿದರು. ಓದಿದ್ದನ್ನು ಹೇಳುವುದನ್ನು ಕಲಿಯಬೇಕು. ಶಂಕರಾಚಾರ್ಯರು ಯೋಗದ ಬಗ್ಗೆ ಬಹಳ ಮಹತ್ವವನ್ನು ಕೊಟ್ಟಿದ್ದಾರೆ.ತಮ್ಮ ಶ್ಲೋಕ ಗಳಲ್ಲಿ ಯೋಗಿಗಳ ಕುರಿತು ಉಲ್ಲೇಖಿಸಿದ್ದಾರೆ.ಯೋಗಮಂದಿರದಲ್ಲಿ ಯೋಗಕ್ಕೆ ಸಂಭoದಿಸಿದoತೆ ಹಲವು ಚಟುವಟಿಕೆಗಳು ನಡೆಯುತ್ತಿವೆ. ಒಳ್ಳೆಯ ಹವ್ಯಾಸ ಗಳಲ್ಲಿ ಅದ್ಬುತ ಹವ್ಯಾಸ ವೆಂದರೆ ಅದು ಯೋಗ ವಾಗಿದೆ. ಮುಂಜಾನೆಯ ಯೋಗಕ್ಕೆ ರಾತ್ರಿಯ ನಿದ್ದೆಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಯೋಗವನ್ನು ಜಾಗೃತ ಗೊಳಿಸುವುದೇ ಯೋಗಮಂದಿರ ಸಂಸ್ಥೆಯ ಉದ್ದೇಶವಾಗಿದೆ. ನಿಯಮಿತ ಆಹಾರ ಸೇವನೆ, ವೈವಾಹಿಕ ವಿಷಯಗಳಲ್ಲಿ ನಿಯಮಪಾಲನೆಯನ್ನು ಮಾಡಬೇಕು.ಆಗ ಜೀವನ ಸುಂದರವಾಗಿರುತ್ತದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ.ಶಿರಸಿ ಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯೋಗಮಂದಿರ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಧರ್ಮ ಸಂಸ್ಕೃತಿ ಯ ಆಚರಣೆಗಳು ಬಹಳ ಸುಂದರವಾಗಿ ಇಲ್ಲಿ ನಡೆಯುತ್ತಿದೆ. ಜನಜೀವನ ದ ಮಧ್ಯೆ ನೆಮ್ಮದಿ ತರಲು ಧಾರ್ಮಿಕ ಕ್ಷೇತ್ರವೂ ಬಹುಮುಖ್ಯ ಪಾತ್ರ ವಹಿಸುತ್ತದೆ. ಜನರ ಮಧ್ಯೆ ಆಧ್ಯಾತ್ಮಿಕ ಚಿಂತನೆ ನಡೆಸಲು ಯೋಗಮಂದಿರ ಪ್ರಶಸ್ತ ವಾಗಿದೆ. ಒಳ್ಳೆಯ ಕೆಲಸ ಮಾಡುವಾಗ ಸಂಘಟಿತರಾಗಿರಬೇಕು.ಆಗ ಮಾತ್ರ ಕೆಲಸ ಸಂಪೂರ್ಣ ವಾಗುತ್ತದೆ.ಇಂತಹ ಧಾರ್ಮಿಕ ಕೇಂದ್ರಗಳು ಬಲಗೊಳ್ಳಲು ಎಲ್ಲರ ಸಹಕಾರ ಅಗತ್ಯ ವಾಗಿರುತ್ತದೆ. ನಮ್ಮ ಆಧ್ಯಾತ್ಮಿಕ ತಳಹದಿ ಭದ್ರವಾಗಿರಬೇಕು. ಆಗ ಮಾತ್ರ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ನಂಬಿಕೆ ಶ್ರದ್ಧೆ ಭಕ್ತಿ ಯನ್ನು ನಾವು ಜೀವನದಲ್ಲಿ ತೊಡಗಿಸಿಕೊಳ್ಳಬೇಕು.ರಾಷ್ಟ್ರ ಜೀವನದಲ್ಲಿ ಯಶಸ್ಸು ಕಾಣುವ ಜೀವನವನ್ನು ನಾವು ರೂಪಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ನಿವೃತ್ತ ಶಿಕ್ಷಣಾಧಿಕಾರಿ ಮತ್ತು ಯೋಗಾಚಾರ್ಯ ಬಿ.ಶಂಕರನಾರಾಯಣ ಶಾಸ್ತ್ರೀ, ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಎಲ್ ಆರ್ ಭಟ್ , ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಆರ್ ಎನ್ ಹೆಗಡೆ ಗೋರ್ಸಗದ್ದೆ,ಎನ್ ವಿ ಹೆಗಡೆ ಬರೂರ ಹಾಗೂ ರಾಮಚಂದ್ರ ಗಾಂವಕರ ಇವರುಗಳನ್ನು ಶ್ರೀಗಳು ಸನ್ಮಾನಿಸಿದರು.
ವಿಸ್ಮಯ ನ್ಯೂಸ್, ಶಿರಸಿ