ಟಿಕೆಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿ ನಾಗರಾಜ್ ನಾಯಕ ತೊರ್ಕೆ: ಸಂಘ ಪರಿವಾರ, ಕಾರ್ಯಕರ್ತರ ಜೊತೆ ಉತ್ತಮ ಸಂಪರ್ಕ

ಕುಮಟಾ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಕೆಟ್ ಗಾಗಿ ಕಸರತ್ತು ಜೋರಾಗಿದೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ನಾಗರಾಜ್ ನಾಯಕ ತೊರ್ಕೆ, ಭಾರತೀಯ ಜನತಾ ಪಾರ್ಟಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದೇ ಗುರುತಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರೀಯವಾಗಿದ್ದು, ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜಿಲ್ಲೆಯಾದ್ಯಂತ ಸಂಚರಿಸಿ, ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಎಲ್ಲಾ ಸಮಾಜದ ಜೊತೆಗೂ ಆತ್ಮೀಯ ಸಂಬAಧ ಹೊಂದಿದ್ದು, ಎಲ್ಲಾ ಪಕ್ಷದ ಕಾರ್ಯಕರ್ತರ ಜೊತೆಗೂ ನಿಕಟ ಸಂಪರ್ಕಗಳಿಸಿ, ಜನಮನ್ನಣೆ ಪಡೆದಿರೋದು ನಾಗರಾಜ್ ನಾಯಕ ತೋರ್ಕೆ ಅವರಿಗೆ ಪ್ಲಸ್ ಪಾಯಿಂಟ್ ಎಂದೇ ಹೇಳಲಾಗುತ್ತಿದೆ.

ಇದೇ ವೇಳೆ, ಬಿಜೆಪಿಯ ಕಾರ್ಯಕರ್ತರ ವಲಯದಲ್ಲೂ ಉತ್ತಮ ಹೆಸರು ಗಳಿಸಿದ್ದು, ಸಂಘ ಪರಿವಾರದ ನಾಯಕರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ., ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕುಮಟಾ ಮಂಡಲದ ಚುನಾವಣಾ ಉಸ್ತುವಾರಿ ಕೆಲಸ ಮಾಡಿದ್ದು, ಕೋವಿಡ್ ವೇಳೆ ಆಂಬುಲೆನ್ಸ್ ವಿಭಾಗದ ಜಿಲ್ಲಾ ಸಂಚಾಲಕರಾರಿಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ವೃಕ್ಷೆÆÃರೋಪಣ ಕಾರ್ಯಕ್ರಮದಲ್ಲಿ ಮತ್ತು ಹರ್ ಘರ್ ತಿರಂಗ, ವಿಭಜನ್ ವಿಭಿಷಿಕ ಸ್ಮೃತಿ ದಿವಸ್ ಕಾರ್ಯಕ್ರಮದಲ್ಲಿ ಜಿಲ್ಲಾಸಂಚಾಲಕ ಕಾರ್ಯಕ್ರಮ ನಿರ್ವಹಿಸಿ, ಮೆಚ್ಚುಗೆ ಪಡೆದಿದ್ದಾರೆ .ಬಿಜೆಪಿ ಸದಸ್ಯತ್ವ ಅಭಿಯಾನದಲ್ಲೂ ಪಾಲ್ಗೊಂಡು ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ನೋಂದಾಯಿಸುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಜಿಲ್ಲಾ ವಿಶೇಷ ಆಹ್ವಾನಿತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಸಕ್ರೀಯರಾಗಿರುವುದು, ಟಿಕೆಟ್ ರೇಸ್‌ನಲ್ಲಿ ನಾಗರಾಜ್ ನಾಯಕ ತೊರ್ಕೆ ಅವರ ಹೆಸರನ್ನು ಮುನ್ನೆಲೆಗೆ ಬರುವಂತೆ ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ತನ್ನದೇ ಆದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮೂಲಕ ಪ್ರತಿಭಾಪುರಸ್ಕಾರ, ವಿದ್ಯಾರ್ಥಿಗಳಿಗೆ ತೆರಬೇತಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಸಂತ್ರಸ್ತರಿಗೆ ನೆರವು, ವೈದ್ಯಕೀಯ ನೆರವು, ಕಲೆ-ಕಲಾವಿದರಿಗೆ ಪ್ರೋತ್ಸಾಹ, ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಹಾಯ ಮಾಡುತ್ತಿದ್ದು, ಸಾಮಾಜಿಕ ಸೇವೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಕಟ್ಟಕಡೆಯ ವ್ಯಕ್ತಿಯ ಜೊತೆಗೂ ಸಂಪರ್ಕ ಹೊಂದಿದ್ದಾರೆ. ಟಿಕೆಟ್ ಸಿಕ್ಕಲ್ಲಿ, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಚಾತುರ್ಯ ಮತ್ತು ಜಾಣ್ಮೆ ಹಾಗು ಅರ್ಹತೆ ನಾಗರಾಜ್ ನಾಯಕ ತೊರ್ಕೆ ಅವರದಲ್ಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version