ಮುರ್ಡೇಶ್ವರ ಸರಕಾರಿ ಆಸ್ಪತ್ರೆಯ ಬೇಜವಾಬ್ದಾರಿ ತನಕ್ಕೆ ಬೇಕರಿ ಉದ್ಯಮಿ ಸಾವು ಆರೋಪ!?

ಆಸ್ಪತ್ರೆಯ ಮುಂದೆ ಮೃತ ಕುಟುಂಬಸ್ಥರ ಆಕ್ರಂದನ
ಕರೊನಾ ವರದಿ ನೆಗೆಟಿವ್

[sliders_pack id=”3498″]

ಭಟ್ಕಳ: ವೈದ್ಯರ ನಿಷ್ಕಾಳಜಿಯಿಂದ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ ಎಂದು ಮೃತರ ಸಂಬಂಧಿಕರು, ಸ್ಥಳೀಯರು ಹಾಗೂ ಮುರುಡೇಶ್ವ ಮಾವಳ್ಳಿ-2 ಗ್ರಾಮ ಪಂಚಾಯತ ಮಾಜಿ ಸದಸ್ಯ ಭಟ್ಕಳ ತಾಲೂಕಾಸ್ಪತ್ರೆ ಬಳಿ ಬಂದು ಆರೋಪ ಮಾಡಿದ್ದಾರೆ.

ಮೂಲತಃ ರಾಜಸ್ಥಾನದ ಪ್ರಸ್ತುತ
ಮುರ್ಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಉಕ್ಮಾರಾಮ್ ಬೋರಾನ್ (65) ಮೃತ ವ್ಯಕ್ತಿ. ಇವರು ಪತ್ನಿ ಮತ್ತು ಒರ್ವ ಪುತ್ರನನ್ನು ಅಗಲಿದ್ದಾರೆ. ಇವರು ಕಳೆದ 35 ವರ್ಷಗಳಿಂದ ಮುರ್ಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದರು. ಇವರು ಸೋಮವಾರ ಮುಂಜಾನೆ ಎದೆನೋವಿನಿಂದ ಅಸ್ವಸ್ಥಗೊಂಡ ಖಾಸಗಿ ಕ್ಲಿನಿಕ್‍ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುವಾಗ ಮೂರ್ಚೆ ಹೋಗಿದ್ದಾರೆ. ನಂತರ ಕೂಡಲೆ ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಅವರು ಮುರ್ಡೇಶ್ವರದ ಖಾಸಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ದೊರಕದೆ ನಂತರ ಕ್ಲಿನಿಕ್ ವೈದ್ಯರು ಪರೀಶೀಲನೆ ನಡೆಸಿ, ರೋಗಿ ಉಸಿರಾಡುತ್ತಿದ್ದು ಕೂಡಲೆ ತಾಲೂಕಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆಸ್ಪತ್ರೆಗೆ ಬರುವಾಗ ಮಾರ್ಗ ಮದ್ಯದಲ್ಲಿ ರೋಗಿ ಮೃತಪಟ್ಟಿದ್ದಾರೆ.

ಇದರಿಂದ ಕುಟುಂಬದವರು, ಸ್ಥಳೀಯರು ಮುರ್ಡೇಶ್ವರ ಆಸ್ಪತ್ರೆಯ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸೂಕ್ತ ಸಮಯದಲ್ಲಿ ಪರೀಶೀಲನೆ ನಡೆಸಿ ಚಿಕಿತ್ಸೆ ನೀಡಿದ್ದರೆ ರೋಗಿ ಬದುಕುಳಿಯುತ್ತಿದ್ದರು. ಇದು ವೈದ್ಯರ ನಿರ್ಲಕ್ಯದಿಂದ ಸಾವಾಗಿದೆ ಎಂದು ಆರೋಪಿಸಿದ್ದಾರೆ.
ಮೃತ ವ್ಯಕ್ತಿಯ ಕೋವಿಡ್ ವರದಿ ನೆಗೆಟಿವ್ ಎಂದು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತಿಳಿಸಲಾಗಿದೆ.

ನಂತರ ಈ ಬಗ್ಗೆ ಮಾತನಾಡಿದ ಮುರುಡೇಶ್ವ ಮಾವಳ್ಳಿ-2 ಗ್ರಾಮ ಪಂಚಾಯತ ಮಾಜಿ ಸದಸ್ಯ ಇವರಿಗೆ ಮುಂಜಾನೆ 4 ಗಂಟೆ ಸುಮಾರಿಗೆ ಸ್ವಲ್ಪ ಎದೆ ನೀವು ಕಾಣಿಸಿಕೊಂಡಿದ್ದು ನಂತರ ಬೆಳಿಗ್ಗೆ ನಂತರ ಮನೆಯ ಹತ್ತಿರದಲ್ಲಿರುವ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತೆರಳುವ ವೇಳೆಗೆ ಮೂರ್ಛೆ ಹೋಗಿದ್ದಾರೆ. ನಂತರ ಮುರುಡೇಶ್ವ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿಕಿತ್ಸೆ ದೊರೆಯಲಿಲ್ಲ.. ಎರಡು ತಾಸಿಗೂ ಹೆಚ್ಚುಕಾಲ ಚಿಕಿತ್ಸೆಗಾಗಿ ಅಲೆದಾಡಿಸಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿ ಸಾವನ್ನಪ್ಪಿರುವ ಬಗ್ಗೆ ತಾಲೂಕಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ , ಭಟ್ಕಳ

Exit mobile version