ಲಿಂಗತ್ವ ಅಲ್ಪಸಂಖ್ಯಾತರ ನೂತನ ಅಂತರoಗ ಸಂಘ ಉದ್ಘಾಟನೆ

ಕಾರವಾರ: ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಬದುಕು ನಡೆಸಲು ಪ್ರಯತ್ನಿಸಬೇಕು ಎಂದು ಕಾರವಾರ ಮಹಿಳಾ ಠಾಣೆಯ ಸಬ್ ಇನ್ಸ್ಸ್ಪೆಕ್ಟರ್ ಶಶಿಕಾಂತ ವರ್ಮಾ ಹೇಳಿದರು. 

ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರ ನೂತನ ಅಂತರoಗ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ 2023ರ ರಾಜ್ಯ ವಿಧಾನಸಭಾ ಚುನಾವಣೆಯ ರಾಯಭಾರಿಯಾಗಿ ಜೋಗತಿ ಮಂಜಮ್ಮ ಅವರನ್ನು ನೇಮಕ ಮಾಡಿದೆ. ಇದು ಎಲ್ಲ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ಪೂರ್ತಿಯಾಗಿದೆ. ನೀವೆಲ್ಲರೂ ಖಡ್ಡಾಯವಾಗಿ ಮತದಾನ ಮಾಡಬೇಕು ಎಂದರು.

ಬೆಂಗಳೂರಿನ ಸಂಗಮ ಸಂಸ್ಥೆ ಅಧಿಕಾರಿ ತಾನಾಜಿ ಸಾವಂತ ಮಾತನಾಡಿ, ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರನ್ನು ಒಂದೆಡೆ ಸೇರಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಂತರoಘ ಸಂಘ ಸ್ಥಾಪಿಸಿರುವುದು ಒಳ್ಳೆಯ ಕಾರ್ಯ. ಅದೆಷ್ಟೋ ಲಿಂಗತ್ವ ಅಲ್ಪಸಂಖ್ಯಾತರಿಗೆ ತಮಗಿರುವ ಸೌಲಭ್ಯಗಳ ಬಗ್ಗೆ ಅರಿವೆ ಇಲ್ಲ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ, ಸಮಸ್ಯೆಗಳ ಬಗ್ಗೆ ಸಂಗಮ ಸಂಸ್ಥೆ ಮೂಲಕ ಎಲ್ಲ ರಿತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 

ವಕೀಲೆ ಕವಿತಾ ನಾಯ್ಕ ಮಾತನಾಡಿ, ಲಿಂಗತ್ವ ಅಲ್ಪ ಸಂಖ್ಯಾತರು ಇದೀಗ ತಮ್ಮ ಕೌಶಲ್ಯಗಳ ಮೂಲಕ ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯ. ಕಾನೂನಿನಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸಮಾನ ಅವಕಾಶವಿದೆ. ಅಭಿವ್ಯಕ್ತಿ ಸ್ವಾತಂತ್ರö್ಯ, ಆಸ್ತಿ ಹಕ್ಕು ಸೇರಿದಂತೆ ಎಲ್ಲದರಲ್ಲಿಯೂ ಜನಸಮಾನ್ಯರಂತೆಯೇ ಮುಕ್ತ ಸ್ವಾತಂತ್ರ ನೀಡಲಾಗಿದೆ. ಇದರಲ್ಲಿ ಯಾರೇ ತಾರತಮ್ಯ ಮಾಡಿದರು ಕಾನೂನಿನ ಮೂಲಕ ಹೋರಾಟ ಮಾಡಬಹುದಾಗಿದೆ. ಇದಕ್ಕೆ ಉಚಿತ ಕಾನೂನಿನ ನೆರವು ಕೂಡ ಕಲ್ಪಿಸಲಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾದ ಕೋಸಲ್ ಮತ್ತು ಅರುಂಧತಿ ತಾವು ಬದಲಾದ ಬಗ್ಗೆ ಮತ್ತು ಕುಟುಂಬ ಹಾಗೂ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಶ್ಯಾಮಲಾ ಸಿ.ಕೆ ವಹಿಸಿದ್ದರು.

Exit mobile version