ಬಳಕೆ ಮಾಡಲ್ಪಟ್ಟ ಕಳಪೆ ಗುಣಮಟ್ಟದ ಜಲ್ಲಿಗಳೊಂದಿಗೆ ದುರಸ್ಥಿ ಕಾಮಗಾರಿ: ಐಆರ್‌ಬಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಭಟ್ಕಳ: ತಾಲೂಕಿನ ಮುಖ್ಯ ವೃತ್ತದಲ್ಲಿ ಕಳಪೆ ಗುಣಮಟ್ಟದ ಬಳಕೆ ಮಾಡಲ್ಪಟ್ಟ ಜಲ್ಲಿಗಳೊಂದಿಗೆ ದುರಸ್ಥಿ ಕಾಮಗಾರಿ ನಡೆಸಲು ಬಂದ ಐಆರ್‌ಬಿ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಕಳೆದ ಹಲವು ತಿಂಗಳಿoದ ಭಟ್ಕಳದ ಮುಖ್ಯ ವೃತ್ತ ಸಂಪೂರ್ಣವಾಗಿ ಹೊಂಡಮಯವಾಗಿ ಬದಲಾಗಿದ್ದು, ಮಳೆಗಾಲದಲ್ಲಿ ಕೆರೆಯಾಗಿ ಬದಲಾಗುತ್ತಿದೆ. ಸಾರ್ವಜನಿಕರು ಅನೇಕ ಬಾರಿ ಈ ಕುರಿತಾಗಿ ಜನಪ್ರತಿನಿದಿಗಳಲ್ಲಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.

ಸಮಸ್ಯೆಗಳು ಹೆಚ್ಚಾದಾಗ ಕೇವಲ ಪ್ಯಾಚ್ ವರ್ಕ ಮಾತ್ರ ಮಾಡಿ ಹೋಗುತ್ತಾರೆ. ಈಗಲೂ ಕೂಡ ಐಆರ್‌ಬಿ ತಂಡ ಪ್ಯಾಚ್ ವರ್ಕ ಮಾಡುವ ಸಲುವಾಗಿ ಬಂದಿದೆ. ಅದು ಕೂಡ ಬೆರೆ ಕಡೆ ರಸ್ತೆಯಲ್ಲಿ ಬಳಕೆ ಮಾಡಿದ ಜಲ್ಲಿಯನ್ನು ಇಲ್ಲಿ ಮರು ಬಳಕೆ ಮಾಡುತ್ತಿದೆ. ಹೀಗೆ ಕೆಲಸ ಮಾಡುವುದಾದರೆ ನಾವು ಕೆಲಸ ಮಾಡಲು ಬಿಡುವುದಿಲ್ಲ ಸಾರ್ವಜನಿಕರು ಬಿಗಿ ಪಟ್ಟುಹಿಡಿದರು.

ಭಟ್ಕಳ ಮುಖ್ಯ ವೃತ್ತದ ಹತ್ತಿರ ಅನೇಕ ಶಾಲಾ ಕಾಲೇಜುಗಳು ಆಸ್ಪತ್ರೆಗಳು ಇದ್ದು ಇಲ್ಲಿ ವಾಹನ ದಟ್ಟಣೆಯೊಂದಿಗೆ ಪಾದಾಚಾರಿಗಳ ಓಡಾಟವೂ ಹೆಚ್ಚಾಗಿರುತ್ತದೆ, ವಿದ್ಯಾರ್ಥಿಗಳಾದಿಯಾಗಿ ವಯೋವೃದ್ಧರು ತಿರುಗಾಡುವ ಈ ರಸ್ತೆಯಲ್ಲಿ ಹೊಂಡದ ಕಾರಣದಿಂದಾಗಿ ದಿನಂಪ್ರತಿ ರಸ್ತೆ ಅಪಘಾತಗಳು ಸಂಭವಿಸುತ್ತಿರುತ್ತದೆ ಆದರೆ ಐ ಆರ್ ಬಿ ಮಾತ್ರ ಅದೇ ಆಮೇ ಗತಿಯ ಕಾಮಗಾರಿಯನ್ನು ಮುಂದುವರೆಸಿಕೊoಡು ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯನ್ನು ಸಾವಿನ ಮನೆಯಾಗಿಸಲು ಹೊರಟಿದೆಯಾ ಎಂಬ ಅನುಮಾನವಂತೂ ಕಾಡುತ್ತಿರುದು ಸುಳ್ಳಲ್ಲ.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Exit mobile version