ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ ಹೊನ್ನಾವರದಲ್ಲಿ ಚಿಣ್ಣರಕಲರವ

ಹೊನ್ನಾವರ: ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆ ಹೊನ್ನಾವರದಲ್ಲಿ ಚಿಣ್ಣರಕಲರವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವ ಉದ್ದೇಶದಿಂದ ಸುತ್ತಮುತ್ತಲಿನ ಇತರೆ ಶಾಲೆಗಳ ವಿದ್ಯಾರ್ಥಿಗಳಿಗೂ ವೇದಿಕೆಯನ್ನು ಕಲ್ಪಿಸಿಕೊಡುವ ಸಲುವಾಗಿ ಚಿಣ್ಣರಕಲರವವನ್ನು ಆಯೊಜಿಲಾಗಿತ್ತು. ಸುಮಾರು 50 ಕ್ಕೂ ಹೆಚ್ಚಿನ ವಿದ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 3 ರಿಂದ 7 ವರ್ಷದೊಳಗಿನ ಮ್ಕಕಳಿಗಾಗಿ ಛದ್ಮವೇಷ, ಕಥೆಹೇಳುವುದು,ಗಾಯನ ಸ್ಫರ್ದೆ,ಚಿತ್ರಕ್ಕೆ ಬಣ್ಣತುಂಬುವುದು ಈ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಿಎಸ್‌ಎನ್‌ಎಲ್ ಮಾಜಿಉದ್ಯೋಗಿ ಎಂ.ಎo.ಭಟ್‌ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಅಲ್ಲದೆ ಬಳಿಕ ಮಾತನಾಡಿ ಮಕ್ಕಳಲ್ಲಿ ಭಾಗವಹಿಸುವ ಗುಣ ಬೆಳೆಯಬೇಕು ಎಂದರು. ನಿವೃತ್ತ ಶಿಕ್ಷಕರಾದ ಕೆ.ವಿ.ಹೆಗಡೆ ಹಾಗೂ ಎನ್.ಆರ್.ಹೆಗಡೆ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಹಾಜರಿದ್ದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಇದರ ನಿರ್ದೆಶಕಕೃಷ್ಣಮೂರ್ತಿ ಭಟ್, ಶಿವಾನಿ ಮಾತನಾಡಿ ತಂದೆ ತಾಯಿಗಳು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ ನೀಡಬೇಕು. ಎಸ್.ಎಸ್.ಎಲ್.ಸಿ ಆಗುವವರೆಗೆ ಮಾತ್ರ ಮಕ್ಕಳನ್ನು ಬಗ್ಗಿಸಲು ಸಾಧ್ಯ. ಈ ಗಿನ ಸ್ಫರ್ಧಾತ್ಮಕ ಯುಗದಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಡಿ. ಸಮಾಜದಲ್ಲಿ ಮಕ್ಕಳು ಬೆಳೆಯಲು ಅವಕಾಶವನ್ನು ನೀಡಬೇಕು.ಜೊತೆಗೆ ಮಕ್ಕಳಿಗೆ ಗುರಿಯನ್ನುಇಟ್ಟುಕೊಂಡುಕಲಿಯಲು ಪ್ರೇರೆಪಣೆಯನ್ನು ನೀಡಬೇಕುಎಂದು ನುಡಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version