ಹೊನ್ನಾವರ ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿಹಬ್ಬ : ಏಪ್ರಿಲ್ 11 ರಂದು ಅದ್ಧೂರಿ ಕಾರ್ಯಕ್ರಮ

ಹೊನ್ನಾವರ: ಶರಾವತಿ ಪತ್ತಿನ ಸಹಕಾರ ಸಂಘದ ಬೆಳ್ಳಿ ಹಬ್ಬ ಏಪ್ರಿಲ್ 11 ರಂದು ಬೆಳಿಗ್ಗೆ 11.50 ಗಂಟೆಗೆ ಪಟ್ಟಣದ ದುರ್ಗಾಕೇರಿಯ ಶ್ರೀ ಲಕ್ಷಿö್ಮ ನಾರಾಯಣ ದೇವಸ್ಥಾನದ ಹೊರ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಜು ನಾಯ್ಕ ತಿಳಿಸಿದರು. ಹೊನ್ನಾವರ ಪಟ್ಟಣದ ಶ್ರೀ ಶ್ರೀ ಲಕ್ಷಿö್ಮ ನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವರ್ಣವಲ್ಲೀ ಶ್ರೀ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳ್ಳಿ ಹಬ್ಬ ನಡೆಯಲಿದೆ, 1998ರಲ್ಲಿ ಕೇವಲ 35 ಸಾವಿರ ರೂ. ಭಂಡವಾಳದಲ್ಲಿ ಸಂಘವನ್ನು ಸ್ಥಾಪಿಸಲಾಗಿತ್ತು. ಈಗ 15 ಕೋಟಿಗಳಷ್ಟು ಭಂಡವಾಳ ಹೊಂದಿದೆ. 11 ಕೋಟಿ ರೂ. ಗಳಷ್ಟು ಠೇವಣಿ ಇದೆ, 10-15 ಕೋಟಿ ರೂ. ಸಾಲ ನೀಡಿದ್ದು ವಸೂಲಾತಿ ಶೇಕಡಾ 95ರಷ್ಟಿದೆ ಎಂದು ತಿಳಿಸಿದರು. ಏಳುವರೆ ವರ್ಷಗಳಲ್ಲಿ ದ್ವಿಗುಣವಾಗುವ ಠೇವಣಿ ಯೋಜನೆಯನ್ನು ಹಿರಿಯರಿಗಾಗಿ ಬೆಳ್ಳಿ ಹಬ್ಬದ ಈ ಸಂದರ್ಭದಲ್ಲಿ ತರಲಿದ್ದೇವೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ರಾಜೇಶ ಸಾಳೇಹಿತ್ತಲ ಮಾತನಾಡಿ ಬೆಳಿಗ್ಗೆ 11.30 ಗಂಟೆಗೆ ಸ್ವರ್ಣವಲ್ಲಿ ಶ್ರೀ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಗಮಿಸುವರು. ಸಭಾ ಕಾರ್ಯಕ್ರಮದ ಮೊದಲು ಹೋಮ ಹವನ ನೆರವೇರಲಿದೆ. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಘದ ಸಂಸ್ಥಾಪನಾ ಸಂದರ್ಭದ ನಿರ್ದೇಶಕರನ್ನು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.. ಸುದ್ದಿಗೋಷ್ಠಿಯಲ್ಲಿ ಕೃಷ್ಣ ನಾಯ್ಕ, ಉಲ್ಲಾಸ ನಾಯ್ಕ, ಸುದಾಕರ ನಾಯ್ಕ, ಬಾಳಾ ನಾಯ್ಕ, ಸುಧಾಕರ ನಾಯ್ಕ, ಮೋಹನ ನಾಯ್ಕ, ಸುಚಿತ್ರಾ ನಾಯ್ಕ, ಮುಖ್ಯ ಕಾರ್ಯನಿರ್ವಾಹಕ ಯೋಗೀಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ.

Exit mobile version